ಕರ್ನಾಟಕ

karnataka

ETV Bharat / state

ಕರ್ನಾಟಕ ಬಂದ್​ ಹಿನ್ನೆಲೆ, ಶಿವಮೊಗ್ಗ ಜಿಲ್ಲಾದ್ಯಾಂತ ರೈತ ಸಂಘಟನೆಯಿಂದ ಪ್ರತಿಭಟನೆ: ಕಾಂಗ್ರೆಸ್​ ಧ್ವಜ ಬೇಡವೆಂದ ರೈತರು - Farmers Organization Protests in Shimoga

ರಾಜ್ಯ ರೈತ ಸಂಘಟನೆ ಕರೆ ನೀಡಿರುವ ಇಂದಿನ ಕರ್ನಾಟಕ ಬಂದ್​ಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಭದ್ರಾವತಿ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ರೈತರು ಪ್ರತಿಭಟನೆ ನಡೆಸುವ ಮೂಲಕ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Farmers Organization Protests
ರೈತ ಸಂಘಟನೆ ವತಿಯಿಂದ ಪ್ರತಿಭಟನೆ

By

Published : Sep 28, 2020, 6:17 PM IST

ಶಿವಮೊಗ್ಗ: ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಬೆಂಬಲಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ತಾಲೂಕಿನ‌ ಬೇಡರ ಹೊಸಳ್ಳಿ ಬಳಿ ರೈತರು ರಸ್ತೆಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ ಎಂಬ ಕಾರಣಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು 10ಕ್ಕೂ ಹೆಚ್ಚು ರೈತರನ್ನು ಬಂಧಿಸಿದ್ದಾರೆ.

ರೈತ ಸಂಘಟನೆ ವತಿಯಿಂದ ಪ್ರತಿಭಟನೆ

ನಮ್ಮ ಪ್ರತಿಭಟನೆಗೆ ಕಾಂಗ್ರೆಸ್​​ ಪಕ್ಷದ ಧ್ವಜ ಬೇಡವೆಂದ ಶಿಕಾರಿಪುರ ರೈತ ಸಂಘ:

ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಕರ್ನಾಟಕ ಬಂದ್ ಬೆಂಬಲಿಸಿ ರೈತ ಸಂಘ ಪ್ರತಿಭಟನೆ ನಡೆಸುತ್ತಿರುವ ವೇಳೆ, ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಈ ಪ್ರತಿಭಟನೆಯಲ್ಲಿ ಸೇರಿಕೊಳ್ಳಲು ಯತ್ನಿಸಿದ್ದರು. ಇದಕ್ಕೆ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ ರೈತ ಸಂಘ, ನಾವು ಪೊಲೀಸರ ಅನುಮತಿ ಪಡೆದು ಪ್ರತಿಭಟನೆ ನಡೆಸುತ್ತಿದ್ದೇವೆ, ನೀವು ನಿಮ್ಮ ಕಾಂಗ್ರೆಸ್ ಪಕ್ಷದ ಧ್ವಜ ಬಿಟ್ಟು ನಮ್ಮ ಪ್ರತಿಭಟನೆಗೆ ಬನ್ನಿ ಎಂದು ತಿಳಿಸಿದ್ದಾರೆ.

ಭದ್ರಾವತಿಯಲ್ಲಿಯೂ ಸಹ ಕರವೇ ಸೇರಿದಂತೆ‌ ವಿವಿಧ ಸಂಘಟನೆಗಳಗಳು ಕರ್ನಾಟಕ ಬಂದ್​​ಗೆ ಬೆಂಬಲ ಸೂಚಿಸಿದ್ದವು. ನಗರದಲ್ಲಿ‌ ಮೆರವಣಿಗೆ ನಡೆಸಿ, ಅಂಡರ್​​ ಪಾಸ್ ಬಳಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ದ ಆಕ್ರೋಶ ಹೊರ‌ಹಾಕಿದರು.‌

ABOUT THE AUTHOR

...view details