ಕರ್ನಾಟಕ

karnataka

ಶಿವಮೊಗ್ಗ:ಭತ್ತದ ಕಟಾವು ಮಾಡುವಾಗ ಯಂತ್ರಕ್ಕೆ ಸಿಲುಕಿ ರೈತನ ಕೈ ಕಟ್​​

By

Published : Dec 7, 2022, 3:38 PM IST

ಭತ್ತ ಕಟಾವು ಮಾಡುವಾಗ ಯಂತ್ರಕ್ಕೆ ಸಿಲುಕಿ ರೈತರೊಬ್ಬರ ಕೈ ತುಂಡಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ದೇವಗಂಗೆ ಗ್ರಾಮದಲ್ಲಿ ನಡೆದಿದೆ.

farmers-hand-is-cut-off-while-threshing-paddy-in-shivamogga
ಶಿವಮೊಗ್ಗ : ಭತ್ತದ ಕಟಾವು ಮಾಡುವಾಗ ಯಂತ್ರಕ್ಕೆ ಸಿಲುಕಿ ರೈತನ ಕೈ ಕಟ್​​

ಶಿವಮೊಗ್ಗ: ಭತ್ತದ ಕಟಾವು ಮಾಡುವಾಗ ಯಂತ್ರಕ್ಕೆ ರೈತನ ಕೈ ಸಿಲುಕಿ ತುಂಡಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ದೇವಗಂಗೆ ಗ್ರಾಮದಲ್ಲಿ ನಡೆದಿದೆ. ಮಹೇಶ್ ಗೌಡ ಎಂಬುವರ ಜಮೀನಿನಲ್ಲಿ ಕೆಲಸ ಮಾಡುವಾಗ ವಿಶ್ವನಾಥ್ (54) ಅವರ ಕೈ ಯಂತ್ರಕ್ಕೆ ಸಿಲುಕಿ ತುಂಡಾಗಿದೆ.

ಇನ್ನು ತುಂಡಾದ ಕೈಯನ್ನು ಹಿಡಿದುಕೊಂಡು ರೈತ ವಿಶ್ವನಾಥ ಹೊಸನಗರ ಆಸ್ಪತ್ರೆಗೆ ಬಂದಿದ್ದಾರೆ. ಆದರೆ, ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಕೈ ಮರು ಜೋಡಣೆ ಸಾಧ್ಯವಿಲ್ಲ ಎಂದು ವೈದ್ಯರು ಹೇಳಿರುವುದಾಗಿ ತಿಳಿದು ಬಂದಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಹಾವೇರಿ: ಗದ್ದೆಯಲ್ಲಿ ಉಳುವೆ ಮಾಡುವಾಗ ಟ್ರ್ಯಾಕ್ಟರ್​ ಪಲ್ಟಿ... ರೈತ ಸಾವು

ABOUT THE AUTHOR

...view details