ಕರ್ನಾಟಕ

karnataka

ETV Bharat / state

ನೀರಿನ ಮೋಟಾರ್​​ ತೆಗೆಯಲು ಹೋಗಿ ವಿದ್ಯುತ್​ ಶಾಕ್​​ನಿಂದ ರೈತ ಸಾವು - ಶಿವಮೊಗ್ಗ ರೈತ ಸಾವು

ವಿದ್ಯುತ್​ ಶಾಕ್​ನಿಂದ ರೈತ ಮೃತಪಟ್ಟಿರುವ ಘಟನೆ ಶಿವಮೊಗ್ಗದ ದಿಂಡದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೋಟಾರು ತೆಗೆಯಲು ಹೋಗಿ ವಿದ್ಯುತ್ ಶಾಕ್ ನಿಂದ ರೈತ ಸಾವು

By

Published : Nov 23, 2019, 12:28 PM IST

ಶಿವಮೊಗ್ಗ:ಕಾಲುವೆಯಲ್ಲಿ ಬಿಟ್ಟಿದ್ದ ನೀರಿನ ಮೋಟಾರ್​ ತೆಗೆಯಲು ಹೋಗಿದ್ದ ರೈತ ವಿದ್ಯುತ್ ಶಾಕ್​​ನಿಂದ ಮೃತಪಟ್ಟಿರುವ ಘಟನೆ ಶಿವಮೊಗ್ಗದ ದಿಂಡದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿಕಾರಿಪುರ ತಾಲೂಕು ದಿಂಡದಹಳ್ಳಿಯ ರೈತ ಪರಮೇಶ್ಚರಯ್ಯ(46) ತಮ್ಮ ತೋಟದ ಪಕ್ಕದಲ್ಲಿನ ಕಾಲುವೆಗೆ ಮೋಟಾರ್​ ಬಿಟ್ಟಿದ್ದರು. ಇಂದು ಬೆಳಗ್ಗೆ ಮೋಟಾರ್​​ ಮೇಲೆ ಎತ್ತಲು ಹೋದಾಗ ವೈರ್ ನೀರಿಗೆ ಬಿದ್ದು ಗ್ರೌಂಡ್ ಆಗಿದೆ. ಈ ವೇಳೆ ನೀರಿಗೆ ಇಳಿದಾಗ ಪರಮೇಶ್ವರಪ್ಪ ವಿದ್ಯುತ್ ಗ್ರೌಂಡ್​​ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details