ಕರ್ನಾಟಕ

karnataka

ETV Bharat / state

ಹಾಲು ಹೆಚ್ಚು ಕರೆದವನೇ ಹೀರೊ.. ಶಿವಮೊಗ್ಗ ರೈತ ದಸರಾದಲ್ಲಿ ಮನರಂಜಿಸಿದ ಸ್ಪರ್ಧೆ.. - ರೈತ ದಸರಾ

ಜಿಲ್ಲೆಯಾದ್ಯಂತ ದಸರಾವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತಿದ್ದು, ದಸರಾ ಹಿನ್ನೆಲೆಯಲ್ಲಿ ರೈತ ದಸರಾವನ್ನು ನಡೆಸಲಾಯಿತು.

Farmer dasara celebration

By

Published : Oct 4, 2019, 10:23 AM IST

ಶಿವಮೊಗ್ಗ: ಜಿಲ್ಲೆಯಾದ್ಯಂತ ದಸರಾವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತಿದ್ದು, ದಸರಾ ಹಿನ್ನೆಲೆಯಲ್ಲಿ ರೈತ ದಸರಾವನ್ನು ನಡೆಸಲಾಯಿತು.

ರೈತ ದಸರಾ ಹಿನ್ನಲೆ.. ಹಾಲು ಕರೆಯುವ ಸ್ಪರ್ಧೆ

ರೈತ ದಸರಾದ ಹಿನ್ನೆಲೆಯಲ್ಲಿ ರೈತರಿಗಾಗಿ ಹಾಲು ಕರೆಯುವ ಸ್ಪರ್ಧೆಯನ್ನು ನಗರದ ಎನ್​ಡಿವಿ ಹಾಸ್ಟೆಲ್ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಗೆ ರೈತರು ತಮ್ಮ ಹಸುಗಳ ಸಮೇತ ಆಗಮಿಸಿದ್ದು, ಯಾವ ಹಸುವಿನಿಂದ ನಿಗದಿತ ಅವಧಿಯಲ್ಲಿ ಹೆಚ್ಚು ಹಾಲು ಕರೆಯುತ್ತಾರೆ ಅವರಿಗೆ ಬಹುಮಾನವನ್ನು ನೀಡಲಾಯಿತು. ಪ್ರಥಮ ಬಹುಮಾನ ಐದು‌ ಸಾವಿರ ರೂ., ದ್ವಿತೀಯ ಬಹುಮಾನ ಮೂರು ಸಾವಿರ ಹಾಗೂ ತೃತೀಯ ಬಹುಮಾನ ಎರಡು ಸಾವಿರ ರೂ. ನಿಗದಿ ನೀಡಲಾಯ್ತು.

ABOUT THE AUTHOR

...view details