ಶಿವಮೊಗ್ಗ:ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಆಶ್ಲೀಲ ಫೋಟೋ ಕಳುಹಿಸುತ್ತಿದ್ದ ಓರ್ವನನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ: ಅಶ್ಲೀಲ ಫೋಟೋ ಕಳಿಸುತ್ತಿದ್ದ ಆರೋಪಿ ಅರೆಸ್ಟ್ - ಶಿವಮೊಗ್ಗ ಸುದ್ದಿ
ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಆಶ್ಲೀಲ ಫೋಟೋ ಕಳುಹಿಸುತ್ತಿದ್ದ ಆರೋಪಿಯನ್ನು ಶಿವಮೊಗ್ಗದಲ್ಲಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಫೇಸ್ಬುಕ್ ಖಾತೆ
ಶಿವಮೊಗ್ಗದ ಮಹಿಳೆಯ ಹೆಸರಿನಲ್ಲಿ ನಂಜನಗೂಡಿನ ಸುಪ್ರೀತ್(22) ಎಂಬಾತ ನಕಲಿ ಫೇಸ್ಬುಕ್ ಖಾತೆ ತೆರೆದು ಮಹಿಳೆಯ ಬಗ್ಗೆ ಅಶ್ಲೀಲ ಮೆಸೇಜ್ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದ ಎನ್ನಲಾಗ್ತಿದೆ.
ಈ ಬಗ್ಗೆ ಮಹಿಳೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸಿಇಎನ್ ಇನ್ಸ್‌ಪೆಕ್ಟರ್ ಗುರುರಾಜ್ ಅವರು ಆರೋಪಿ ಸುಪ್ರೀತ್ನನ್ನು ಬಂಧಿಸಿದ್ದಾರೆ.