ಶಿವಮೊಗ್ಗ:ಸೊರಬದ ತಹಶೀಲ್ದಾರ್ ಕಚೇರಿಯಲ್ಲಿ ನಕಲಿ ಸಾಗುವಳಿ ಪತ್ರ ತಯಾರು ಮಾಡಲಾಗುತ್ತಿದೆ ಎಂದು ಶಾಸಕ ಕುಮಾರ ಬಂಗಾರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಸೊರಬದ ಆಡಳಿತ ಭವನದಲ್ಲಿ ನಡೆದ ತಾಪಂ ಸಭೆಯಲ್ಲಿ ನಕಲಿ ಹಕ್ಕುಪತ್ರ ಪ್ರದರ್ಶಿಸಿದ ಶಾಸಕರು, ಈ ರೀತಿಯ ನಕಲಿ ಹಕ್ಕುಪತ್ರಗಳು ತಹಶೀಲ್ದಾರ್ ಕಚೇರಿಯಲ್ಲಿಯೇ ತಯಾರು ಆಗುತ್ತಿವೆ. ಇವಕ್ಕೆ ಇಲ್ಲೇ ಸೀಲು ಬೀಳುತ್ತಿದೆ. ಹಾಗಾಗಿ ಈ ರೀತಿಯ ನಕಲಿ ಹಕ್ಕುಪತ್ರ ಕಂಡು ಬಂದ್ರೆ, ತಕ್ಷಣ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.