ಶಿವಮೊಗ್ಗ:ಪತ್ರಿಕಾ ಸಂಪಾದಕರ ಮೇಲೆ ಸುಳ್ಳು ದೂರು ದಾಖಲಿಸಿದ ಜಯನಗರ ಪಿಎಸ್ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಪ್ರೆಸ್ ಟ್ರಸ್ಟ್ ವತಿಯಿಂದ ಮನವಿ ಮಾಡಲಾಯಿತು.
ಸಂಪಾದಕರ ಮೇಲೆ ಸುಳ್ಳು ದೂರು ದಾಖಲಿಸಿದ ಆರೋಪ : ಅಧಿಕಾರಿಯ ವಿರುದ್ಧ ಕ್ರಮಕ್ಕೆ ಪ್ರೆಸ್ಟ್ರಸ್ಟ್ ಮನವಿ - undefined
ಪತ್ರಿಕಾ ಸಂಪಾದಕರ ಮೇಲೆ ಸುಳ್ಳು ದೂರು ದಾಖಲು ಮಾಡಿರುವ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಪತ್ರಿಕಾ ಸಂಪಾದಕರ ಮೆಲೆ ಸುಳ್ಳು ದೂರು ದಾಖಲು: ಪೊಲೀಸರ ವಿರುದ್ಧ ಕ್ರಮಕ್ಕೆ ಮನವಿ
ಗೂಂಡಾಗಳ ಮೇಲೆ ಹಾಕುವ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಕದಡುವ 107ರ ಕೇಸ್ನ ಎಚ್ಚರಿಕೆ ಪತ್ರಿಕೆ ಸಂಪಾದಕರ ಮೇಲೆ ದಾಖಲಿಸಿರುವುದು ಸುಳ್ಳಿನಿಂದ ಕೂಡಿದೆ. ಇದು ಪೊಲೀಸ್ ಇಲಾಖೆಯ ಅಜ್ಞಾನಕ್ಕೆ ಕನ್ನಡಿ ಹಿಡಿದಂತಾಗಿದೆ. ಪೂರ್ವಾಪರ ಪರಿಶೀಲಿಸಿದೆ ಕೇಸು ದಾಖಲಿಸಿರುವ ಠಾಣಾಧಿಕಾರಿ ವಿರುದ್ಧ ಕ್ರಮ ಕೈಗೊಂಡು, ಅವರನ್ನ ಅಮಾನತಿನಲ್ಲಿಡಬೇಕೆಂದು ಪ್ರೆಸ್ ಟ್ರಸ್ಟ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.