ಶಿವಮೊಗ್ಗ: ಜಿಲ್ಲೆಯ ಎಲ್ಲೆಡೆ ಕಳೆದ ಕೆಲವು ದಿನಗಳಿಂದ ಮಳೆಯ ಆರ್ಭಟ ಮುಂದುವರಿದಿದ್ದು, ಜಲಾಶಯಗಳು ತುಂಬಿ ನೋಡುಗರನ್ನು ಆಕರ್ಷಿಸುತ್ತಿವೆ.
ಶಿವಮೊಗ್ಗದಲ್ಲಿ ಮುಂದುವರಿದ ವರುಣನ ಆರ್ಭಟ: ತುಂಬಿ ಹರಿದ ತುಂಗಾ! - ತುಂಗಾ ಜಲಾಶಯ
ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ಹಾಗೂ ಗಾಜನೂರಿನ ತುಂಗಾ ಜಲಾಶಯಗಳಿಗೆ ಒಳ ಹರಿವು ಹೆಚ್ಚಿದೆ. ಹೀಗಾಗಿ, ಹೆಚ್ಚುವರಿ ನೀರನ್ನು ಗೇಟ್ಗಳ ಮೂಲಕ ಹೊರಬಿಡಲಾಗುತ್ತಿವೆ. ಇದರಿಂದ ನದಿಗಳು ಸಹ ಮೈದುಂಬಿ ಹರಿಯುತ್ತಿವೆ.
ತುಂಬಿದ ಜಲಾಶಯ
ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ಹಾಗೂ ಗಾಜನೂರಿನ ತುಂಗಾ ಜಲಾಶಯಗಳಿಗೆ ಒಳ ಹರಿವು ಹೆಚ್ಚಿದೆ. ಹೀಗಾಗಿ, ಹೆಚ್ಚುವರಿ ನೀರನ್ನು ಗೇಟ್ಗಳ ಮೂಲಕ ಹೊರಬಿಡಲಾಗುತ್ತಿವೆ. ಇದರಿಂದ ನದಿಗಳು ಸಹ ಮೈದುಂಬಿ ಹರಿಯುತ್ತಿವೆ.
ತುಂಗಾ ಜಲಾಶಯದ 21 ಕ್ರಸ್ಟ್ ಗೇಟ್ಗಳನ್ನು ತೆಗೆದು ನೀರು ಹೊರ ಬಿಡಲಾಗುತ್ತಿದ್ದು, ತುಂಗಾ ನದಿಯ ಹೊರ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಸಂಜೆ ಆರು ಘಂಟೆಯ ವೇಳೆಗೆ ತುಂಗಾ ಜಲಾಶಯದ ಹೊರ ಹರಿವು 59,455 ಕ್ಯುಸೆಕ್ನಷ್ಟಿತ್ತು.