ಶಿವಮೊಗ್ಗ: ಪರವಾನಗಿ ಇಲ್ಲದೆ ಸ್ಪೋಟಕ ವಸ್ತುಗಳು ಹಾಗೂ ಪಟಾಕಿ ಸಂಗ್ರಹಿಸಿಟ್ಟಿದ್ದ ವ್ಯಕ್ತಿಯನ್ನು ಸಾಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪರವಾನಗಿ ಇಲ್ಲದೆ ಸ್ಫೋಟಕ ವಸ್ತುಗಳ ಸಂಗ್ರಹ: ಸಾಗರದಲ್ಲಿ ವ್ಯಕ್ತಿ ಅರೆಸ್ಟ್ - Sagara rural police station
ಪರವಾನಗಿ ಇಲ್ಲದೆ ಸ್ಪೋಟಕ ವಸ್ತುಗಳು ಹಾಗೂ ಪಟಾಕಿ ಸಂಗ್ರಹಿಸಿಟ್ಟಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅನಂದಪುರ ಹೋಬಳಿಯ ಮಲಂದೂರು ಗ್ರಾಮದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪರವಾನಿಗೆ ಇಲ್ಲದೆ ಸ್ಫೋಟಕ ವಸ್ತು ಸಂಗ್ರಹ: ಸಾಗರದಲ್ಲಿ ವ್ಯಕ್ತಿ ಬಂಧನ
ಸಾಗರ ತಾಲೂಕಿನ ಅನಂದಪುರ ಹೋಬಳಿಯ ಮಲಂದೂರು ಗ್ರಾಮದಲ್ಲಿ ಅಬ್ದುಲ್ ಖಾದರ್ ಅಲಿಯಾಸ್ ಗರ್ನಲ್ ಬಾಬಣ್ಣ ಬಂಧಿತ ವ್ಯಕ್ತಿ.
ಈತ ಮಲಂದೂರು ಗ್ರಾಮದ ಪಾಳುಬಿದ್ದ ಮನೆಯ ಆವರಣದಲ್ಲಿ ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದಾನೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗದ ಜಿಲ್ಲಾ ಐಎಸ್ಡಿ ಇನ್ಸ್ಪೆಕ್ಟರ್ ತಂಡ ದಾಳಿ ಮಾಡಿ ವಸ್ತುಗಳನ್ನು ಜಪ್ತಿ ಮಾಡಿದೆ.