ಕರ್ನಾಟಕ

karnataka

ETV Bharat / state

ರೈತರು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಕೂಲ ಪಡೆಯಬೇಕು: ಬಿ.ವೈ.ರಾಘವೇಂದ್ರ - ಬಿ.ವೈ.ರಾಘವೇಂದ್ರ

ಅಡಿಕೆ, ಬಾಳೆ, ತೆಂಗು ಹಾಗೂ ಮಾವು ಬೆಳೆಗಾರರು ಬೆಳೆ ವಿಮೆ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

Shimoga
ಬಿ.ವೈ.ರಾಘವೇಂದ್ರ

By

Published : Jul 2, 2020, 2:50 PM IST

ಶಿವಮೊಗ್ಗ:ಹವಾಮಾನ‌ ಆಧಾರಿತ ಬೆಳೆ ವಿಮೆಯ ನೋಂದಣಿ ಮಾಡಿಕೊಳ್ಳಲು ಜುಲೈ‌10 ರ‌ ತನಕ ಕಾಲಾವಧಿ‌ ವಿಸ್ತರಣೆ ಮಾಡಲಾಗಿದೆ. ಜಿಲ್ಲೆಯ ರೈತ‌ರು ಯೋಜನೆಯ‌ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.

ಬೆಳೆ ವಿಮೆ ಬಗ್ಗೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ

ಜೂನ್ 27 ರಂದು ಬೆಳೆ‌ ಆಧಾರಿತ ವಿಮೆ ನೋಂದಾಣಿ ಕುರಿತು‌ ಘೋಷಣೆ ಮಾಡಿದ್ದು ಜೂನ್‌ 30ಕ್ಕೆ ನೋಂದಣಿಯ‌ ಕೊನೆಯ ದಿನ ಎಂದು ರೈತರಿಗೆ ತಿಳಿಸಲಾಗಿತ್ತು. ಈ ವೇಳೆ ತಾಂತ್ರಿಕ‌ ಕಾರಣಗಳಿಂದ ನೋಂದಣಿ ಪ್ರಕ್ರಿಯೆ‌ ಆಗಿರಲಿಲ್ಲ. ಇದಕ್ಕೆ‌ ಸ್ಪಂದಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ಬೆಳೆ ವಿಮೆ ಮಾಡಿಕೊಡಲು ನಿಗದಿಯಾಗಿದ್ದ ಕಾಲಾವಧಿಯನ್ನು ಜುಲೈ 10 ರ ತನಕ ವಿಸ್ತರಿಸಿದೆ.

ಅಡಿಕೆ, ಬಾಳೆ, ತೆಂಗು ಹಾಗೂ ಮಾವು ಬೆಳೆಗಾರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸದರು ತಿಳಿಸಿದರು.

ABOUT THE AUTHOR

...view details