ಶಿವಮೊಗ್ಗ: ಹೋಳಿ ಹಬ್ಬದ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ಮಂಗಳವಾರ ಹಾಗೂ ಬುಧವಾರ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಆದರೆ ಈ ನಿಷೇಧ ನಿಯಮ ಮೀರಿ ಅಕ್ರಮ ಮದ್ಯ ಮಾರಾಟದಲ್ಲಿ ನಿರತರಾಗಿದ್ದ ಮೂವರನ್ನು ಅಬಕಾರಿ ಇಲಾಖೆ ಪೊಲೀಸರು ಬಂಧಿಸಿದ್ದಾರೆ.
ಹೋಳಿ ಹಬ್ಬದಂದು ಅಕ್ರಮ ಮದ್ಯ ಮಾರುತ್ತಿದ್ದ ಮೂವರ ಬಂಧನ - ಅಕ್ರಮ ಮದ್ಯ ಮಾರಾಟ
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿದ್ರೂ ಅಕ್ರಮ ಮಾರಾಟದಲ್ಲಿ ನಿರತರಾಗಿದ್ದ ಆರೋಪಿಗಳನ್ನು ಶಿವಮೊಗ್ಗ ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಮದ್ಯ ಮಾರುತ್ತಿದ್ದವರ ಬಂಧನ
ನಗರದ ಹೊರವಲಯದ ದೇವಕಾತಿಕೊಪ್ಪದ ಸುಶೀಲಮ್ಮ ಎಂಬವರ ಮನೆಯಲ್ಲಿ ಸುಮಾರು 17.28 ಲೀಟರ್, ಅಣ್ಣಾನಗರದ ಕೃಷ್ಣಪ್ಪ ಎಂಬುವರ ಮನೆಯಲ್ಲಿ 3.87 ಲೀಟರ್ ಹಾಗೂ ಗೋಪಾಳದ ವೆಂಕಟರಮಣ ಎನ್ನುವವರ ಮನೆಯಲ್ಲಿದ್ದ ಅಕ್ರಮ ಮದ್ಯವನ್ನು ಪೊಲೀಸರು ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ಒಟ್ಟು 21.600 ಲೀಟರ್ ಅಕ್ರಮ ಮದ್ಯ ಜಪ್ತಿ ಮಾಡಲಾಗಿದೆ.