ಕರ್ನಾಟಕ

karnataka

ETV Bharat / state

ಸಿಎಂ ತವರು ಕ್ಷೇತ್ರದಲ್ಲಿ ಅಬಕಾರಿ ದಾಳಿ: 315 ಲೀಟರ್ ಬೆಲ್ಲದ ಕೊಳೆ ವಶ - ಬೆಲ್ಲದ ಕೊಳೆ ವಶ

ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡದ ಜವಳಕಟ್ಟೆ ಕೆರೆ ಮತ್ತು ಕರೇಕಟ್ಟೆ ಕೆರೆಯ ದಡದಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಅಬಕಾರಿ ಪೊಲೀಸರು ದಾಳಿ ನಡೆಸಿ 315 ಲೀಟರ್ ಬೆಲ್ಲದ‌ ಕೊಳೆಯನ್ನು ವಶಕ್ಕೆ ಪಡೆದಿದ್ದಾರೆ.

exice-attack
ಬೆಲ್ಲದ ಕೊಳೆ ವಶ

By

Published : Feb 4, 2021, 10:29 PM IST

Updated : Feb 4, 2021, 10:41 PM IST

ಶಿವಮೊಗ್ಗ: ಸಿಎಂ ತವರು ಕ್ಷೇತ್ರದ ವಿವಿಧ ಗ್ರಾಮಗಳ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿ, 315 ಲೀಟರ್ ಬೆಲ್ಲದ‌ ಕೊಳೆಯನ್ನು ವಶಕ್ಕೆ ಪಡೆದಿದ್ದಾರೆ.

ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡದ ಜವಳಕಟ್ಟೆ ಕೆರೆ ಮತ್ತು ಕರೇಕಟ್ಟೆ ಕೆರೆಯ ದಡದಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಪ್ರಕರಣದ ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಹುಡುಕಾಟಕ್ಕೆ ತಂಡ ರಚನೆ ಮಾಡಲಾಗಿದೆ.

ಶಿಕಾರಿಪುರದಲ್ಲಿ ಬೆಲ್ಲದ ಕೊಳೆ ವಶ

ದಾಳಿಯಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಡಿ.ಎನ್.ಹನುಮಂತಪ್ಪ ಸೇರಿದಂತೆ ಇತರೆ ಅಧಿಕಾರಿಗಳು‌ ಭಾಗಿಯಾಗಿದ್ದರು.

Last Updated : Feb 4, 2021, 10:41 PM IST

ABOUT THE AUTHOR

...view details