ಶಿವಮೊಗ್ಗ: ಗ್ರಾಮ ಪಂಚಾಯತ್ ಚುನಾವಣೆಗೆ ಹಂಚಲು ಅಕ್ರಮವಾಗಿ ಆಟೋದಲ್ಲಿ ಸಾಗಿಸುತ್ತಿದ್ದ 71 ಲೀಟರ್ ಗೋವಾ ಮದ್ಯವನ್ನು ಅಬಕಾರಿ ಪೊಲೀಸರು ಹೊಸನಗರದ ಚಿಕ್ಕಪೇಟೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಅಬಕಾರಿ ಪೊಲೀಸರ ದಾಳಿ: 80 ಸಾವಿರ ಮೌಲ್ಯದ 71 ಲೀ. ಅಕ್ರಮ ಗೋವಾ ಮದ್ಯ ವಶ - ಶಿವಮೊಗ್ಗದಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ ಸುದ್ದಿ
ಗ್ರಾಮ ಪಂಚಾಯತ್ ಚುನಾವಣೆಗೆ ಹಂಚಲು ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಿಸ್ತಿದ್ದ ಆರೋಪಿಯನ್ನು ಪೊಲೀಸರು ಮದ್ಯ ಸಮೇತ ಬಂಧಿಸಿದ್ದಾರೆ. ಬಂಧಿತ ಆಟೋ ಡ್ರೈವರ್ನಿಂದ ಸುಮಾರು 80 ಸಾವಿರ ರೂ. ಮೌಲ್ಯದ 71 ಲೀ. ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
71 ಲೀ. ಗೋವಾ ಮದ್ಯ ವಶ
ಈ ಮದ್ಯವನ್ನು ಚಿಕ್ಕಪೇಟೆಯ ಸಿರಾಜ್ ಎಂಬಾತ ತನ್ನ ಆಟೋದಲ್ಲಿ ಸಾಗಣೆ ಮಾಡುತ್ತಿದ್ದ ಹಾಗೂ ಮನೆಯಲ್ಲಿ ಕೂಡ ದಾಸ್ತಾನು ಮಾಡಿದ್ದನು. ಸದ್ಯ ಈತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸುಮಾರು 80 ಸಾವಿರ ಮೌಲ್ಯದ ಗೋವಾ ಮದ್ಯವನ್ನು ಹಾಗೂ ಆಟೋವನ್ನು ವಶಕ್ಕೆ ಪಡೆಯಲಾಗಿದೆ.