ಶಿವಮೊಗ್ಗ:ಅಬಕಾರಿ ಇಲಾಖೆ ಅಧಿಕಾರಿಗಳು ಸಾಗರ, ಸೊರಬ, ಶಿಕಾರಿಪುರದ ಮದ್ಯ ತಯಾರಿಕಾ ಸ್ಥಳಗಳ ಮೇಲೆ ದಾಳಿ ನಡೆಸಿ 89 ಪ್ರಕರಣಗಳನ್ನು ದಾಖಲಿಸಿ ಕೊಂಡಿದ್ದಾರೆ.
ಅಬಕಾರಿ ಪೊಲೀಸರ ದಾಳಿ: ಮೂರು ತಾಲೂಕಲ್ಲಿ 89 ಪ್ರಕರಣ ದಾಖಲು - Shimoga latest news
ಅವಕಾರಿ ಇಲಾಖೆ ಅಧಿಕಾರಿಗಳ ತಂಡ ಕಳೆದ 18 ದಿನಗಳಲ್ಲಿ ಸೊರಬ, ಸಾಗರ ಹಾಗೂ ಶಿಕಾರಿಪುರ ವಲಯದಲ್ಲಿ ಮದ್ಯ ತಯಾರಿಕಾ ಸ್ಥಳಗಳ ಮೇಲೆ ದಾಳಿ ನಡೆಸಿ 89 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಕಳೆದ 18 ದಿನಗಳಲ್ಲಿ ಸೊರಬ, ಸಾಗರ ಹಾಗೂ ಶಿಕಾರಿಪುರ ವಲಯದಲ್ಲಿ ಜಿಲ್ಲಾ ಅಬಕಾರಿ ಇಲಾಖೆಯ 3 ತಂಡಗಳು ದಾಳಿ ನಡೆಸಿ ಸುಮಾರು 89 ಪ್ರಕರಣಗಳನ್ನು ದಾಖಲಿಸಲಾಗಿಕೊಂಡಿದ್ದು, ಇದರಲ್ಲಿ 10 ಘೋರ ಅಪರಾಧ ಸಂಬಂಧಿತ ಕೇಸ್ ಗಳಾಗಿವೆ. ದಾಳಿಯಲ್ಲಿ 65 ಲೀ ಕಳ್ಳಭಟ್ಟಿ ಸರಾಯಿ ಮತ್ತು 260 ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆದು ಕೊಳ್ಳಲಾಗಿದ್ದು, ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಇತ್ತಿಚೇಗೆ ಪಂಜಾಬ್ ನಲ್ಲಿ ನಡೆದ ನಕಲಿ ಮದ್ಯದ ದುರಂತದಿಂದ ಎತ್ತೆಚ್ಚ ಅಧಿಕಾರಿಗಳು ಜಿಲ್ಲೆಯಲ್ಲಿ ಈ ರೀತಿಯ ದುರಂತ ನಡೆಯಬಾರದೆಂದು ಜಿಲ್ಲಾ ಅಬಕಾರಿ ಅಧಿಕಾರಿ ಕ್ಯಾಪ್ಟನ್ ಅಜೀತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.