ಶಿವಮೊಗ್ಗ:ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು ಜಂಟಿ ದಾಳಿ ನಡೆಸಿ 110 ಲೀ ಕಳ್ಳಭಟ್ಟಿ ಕೊಳೆಯನ್ನು ವಶಕ್ಕೆ ಪಡೆದಿದ್ದಾರೆ.
ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆ: 110 ಲೀ. ಕಳ್ಳಬಟ್ಟಿ ಕೊಳೆ ವಶ - Excise Officers and Police raid in Sagar
ಜಂಟಿ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು ಮತ್ತು ಪೊಲೀಸರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊಸಕೊಪ್ಪದ ತೋಟದಲ್ಲಿ ಸಂಗ್ರಹಿಸಿಟ್ಟಿದ್ದ ಕಳ್ಳಭಟ್ಟಿ ಕೊಳೆಯನ್ನು ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಅಧಿಕಾರಿಗಳಿಂದ ಕಳ್ಳಭಟ್ಟಿ ಸಾರಾಯಿ ಕೊಳೆ ವಶ
ಸಾಗರ ತಾಲೂಕು ಹೊಸಕೊಪ್ಪದ ಪ್ರಕಾಶ್ ಎಂಬವರ ಅಡಿಕೆ ತೋಟದಲ್ಲಿ ಕಳ್ಳಭಟ್ಟಿ ಸಂಗ್ರಹ ಮಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 4 ಕ್ಯಾನ್ ಹಾಗೂ 2 ಕೊಡ ಸೇರಿ ಒಟ್ಟು 110 ಲೀ ಕಳ್ಳಭಟ್ಟಿ ಕೊಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಸಾಗರ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿಗಳ ತಂಡದಲ್ಲಿ ಸಾಗರ ಡಿವೈಎಸ್ಪಿ ವಿನಾಯಕ್ ಹಾಗೂ ಗ್ರಾಮಾಂತರ ಪಿಎಸ್ ಐ ಭರತ್, ಅಬಕಾರಿ ಪಿಎಸ್ಐ ಸತೀಶ್ ಇದ್ದರು.