ಕರ್ನಾಟಕ

karnataka

ETV Bharat / state

ಸಚಿವ ಈಶ್ವರಪ್ಪ ವಿಘ್ನ ಸಂತೋಷಿಗಳಾಗುತ್ತಿದ್ದಾರೆ : ಕೆ.ಬಿ ಪ್ರಸನ್ನ ಕುಮಾರ್ ವಾಗ್ದಾಳಿ - ಸಚಿವ ಕೆ.ಎಸ್.​ ಈಶ್ವರಪ್ಪ ವಿರುದ್ಧ ಮಾಜಿ ಶಾಸಕ ಆಕ್ರೋಶ

ಜಿಲ್ಲಾ ಕಾಂಗ್ರೆಸ್ ವತಿಯಿಂದ ನಿರ್ಗತಿಕರಿಗೆ, ಭಿಕ್ಷುಕರಿಗೆ ಊಟದ ವ್ಯವಸ್ಥೆ ಹಾಗೂ ರೋಗಿಗಳಿಗೆ ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡುವ ಮೂಲಕ ಅನೇಕ ಸಾಮಾಜಿಕ ಕಳಕಳಿಯ ಕೆಲಸವನ್ನು ಜಿಲ್ಲಾ ಕಾಂಗ್ರೆಸ್ ಮಾಡುತ್ತಿದೆ‌. ಇದು ಸಚಿವರಿಗೆ ಕಾಣುತ್ತಿಲ್ಲ..

pressmeet
pressmeet

By

Published : May 12, 2021, 6:26 PM IST

Updated : May 12, 2021, 7:12 PM IST

ಶಿವಮೊಗ್ಗ: ಗೊಂದಲಮಯ ಹೇಳಿಕೆಗಳನ್ನು ನೀಡುವುದರ ಮೂಲಕ ಕೋವಿಡ್ ಸಂದರ್ಭದಲ್ಲಿ ಜನರಲ್ಲಿ ಆತಂಕವನ್ನು ಉಂಟು ಮಾಡುತ್ತಾ ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚಿಗೆ ವಿಘ್ನ ಸಂತೋಷಿಗಳಾಗುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಆರೋಪಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದುಗಳ ಪವಿತ್ರ ಹಬ್ಬ ಬಸವ ಜಯಂತಿ ಹಾಗೂ ಮುಸ್ಲಿಂ ಬಾಂಧವರ ರಂಜಾನ್ ಹಬ್ಬದ ಸಂದರ್ಭದಲ್ಲಿ ಸಂಪೂರ್ಣ ಲಾಕ್​ಡೌನ್​ ಮಾಡಲಾಗಿದೆ ಎಂಬ ಹೇಳಿಕೆ ನೀಡಿ, ಜನರಲ್ಲಿ ಸಚಿವರು ಆತಂಕವನ್ನು ಹುಟ್ಟಿಸುತ್ತಿದ್ದಾರೆ.

ಸರ್ಕಾರದ ಮಾರ್ಗಸೂಚಿ ಶಿವಮೊಗ್ಗ ನಗರಕ್ಕೆ ಬೇರೆಯೇ ಇದೆ ಎಂದು ಹೇಳಿದ್ರು. ಇವರು ಸಂಪೂರ್ಣ ಲಾಕ್​ಡೌನ್ ಮಾಡಿರುವುದರಿಂದ ಜನರು, ಈಶ್ವರಪ್ಪನವರು ರಂಜಾನ್ ಹಬ್ಬದ ಆಚರಣೆಗೆ ಅಡಚಣೆ ಆಗಲಿ ಎಂಬ ಕಾರಣಕ್ಕೆ ಹಠಾತ್ ನಾಲ್ಕು ದಿನಗಳ ಸಂಪೂರ್ಣ ಲಾಕ್​ಡೌನ್ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ ಎಂದರು.

ಕೆ.ಬಿ ಪ್ರಸನ್ನ ಕುಮಾರ್

ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡಿ ಎಂದು ವಿರೋಧ ಪಕ್ಷದ ನಾಯಕರು ಹೇಳಿದರೆ ನಾವೇನು ನೋಟ್ ಪ್ರಿಂಟ್​ ಮಾಡುತ್ತಿದ್ದೀವಾ ಎಂಬ ಹೇಳಿಕೆ ನೀಡುತ್ತಾರೆ. ಇವರ ಬಳಿ ನೋಟ್ ಪ್ರಿಂಟ್​ ಮಿಷನ್ ಇಲ್ಲ, ನೋಟ್ ಕೌಂಟಿಂಗ್ ಮಿಷನ್ ಇದೆ ಎಂದು ಆರೋಪಿಸಿದರು.

ಕೊರೊನಾ ಸೋಂಕಿತರಿಗೆ ಆಕ್ಸಿಜನ್, ಬೆಡ್ ಹಾಗೂ ಉತ್ತಮ ಚಿಕಿತ್ಸೆ ನೀಡಿ ಮನೆಗೆ ಕಳಿಸುತ್ತೇವೆ ಎನ್ನಬೇಕಾದ ಸಚಿವರು, ಚಿತಾಗಾರದಲ್ಲಿ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿಕೆ ನೀಡುವ ಸಚಿವರಿಗೆ ನಾಚಿಕೆ ಆಗಬೇಕು ಎಂದು ಹರಿಹಾಯ್ದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ನಿರ್ಗತಿಕರಿಗೆ, ಭಿಕ್ಷುಕರಿಗೆ ಊಟದ ವ್ಯವಸ್ಥೆ ಹಾಗೂ ರೋಗಿಗಳಿಗೆ ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡುವ ಮೂಲಕ ಅನೇಕ ಸಾಮಾಜಿಕ ಕಳಕಳಿಯ ಕೆಲಸವನ್ನು ಜಿಲ್ಲಾ ಕಾಂಗ್ರೆಸ್ ಮಾಡುತ್ತಿದೆ‌. ಇದು ಸಚಿವರಿಗೆ ಕಾಣುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನ ಕುಮಾರ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ,ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Last Updated : May 12, 2021, 7:12 PM IST

ABOUT THE AUTHOR

...view details