ಶಿವಮೊಗ್ಗ: ಮೆಗ್ಗನ್ ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಸಂಬಂಧಿಕರಿಗೆ ಮಾಜಿ ಶಾಸಕರಾದ ಕೆ.ಬಿ ಪ್ರಸನ್ನ ಕುಮಾರ್ ಮತ್ತು ಜಿಲ್ಲಾಎನ್ಎಸ್ಯುಐ ಕಾರ್ಯಕರ್ತರು ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.
ಮಾಜಿ ಶಾಸಕ ಪ್ರಸನ್ನಕುಮಾರ್‌ರಿಂದ ಹಸಿದವರಿಗೆ ಆಹಾರ ವಿತರಣೆ - ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಆಹಾರ ವ್ಯವಸ್ಥೆ
ಲಾಕ್ಡೌನ್ ಆಗಿರುವ ಹಿನ್ನೆಲೆ ಅನೇಕ ಜನ ಊಟ ವ್ಯವಸ್ಥೆ ಇಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ, ಅವಶ್ಯಕತೆ ಇರುವವರಿಗೆ ಆಹಾರ ನೀಡುವ ಮೂಲಕ ಜನರ ನೆರವಿಗೆ ಬಂದಿರುವ ಇವರ ಕಾರ್ಯ ಶ್ಲಾಘನೀಯ..
ನಗರದ ಹಲವು ಭಾಗಗಳಲ್ಲಿ ಸಂಚರಿಸಿ ಹಸಿವಿನಿಂದ ಇರುವವರಿಗೆ ಆಹಾರ ನೀಡುತ್ತಿದ್ದಾರೆ. ಲಾಕ್ಡೌನ್ ಆಗಿರುವ ಹಿನ್ನೆಲೆ ಅನೇಕ ಜನ ಊಟ ವ್ಯವಸ್ಥೆ ಇಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ, ಅವಶ್ಯಕತೆ ಇರುವವರಿಗೆ ಆಹಾರ ನೀಡುವ ಮೂಲಕ ಜನರ ನೆರವಿಗೆ ಬಂದಿರುವ ಇವರ ಕಾರ್ಯ ಶ್ಲಾಘನೀಯ.
ಈ ಸಂದರ್ಭದಲ್ಲಿ ಜಿಲ್ಲಾ ಎನ್ಎಸ್ಯುಐನ ಜಿಲ್ಲಾಧ್ಯಕ್ಷರಾದ ಬಾಲಾಜಿ,ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ಕೆ. ಶಿವಮೊಗ್ಗ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮಹಮ್ಮದ್ ನಿಹಾಲ್, ಮಾಜಿ ಸಿಂಡಿಕೇಟ್ ಸದಸ್ಯ ಪೂರ್ಣೇಶ್ ಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ದೀಪಕ್ ಸಿಂಗ್, ಮುಖಂಡರದ ಯೋಗೇಶ್ ಗೌಡ, ಯುವ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಅಧ್ಯಕ್ಷ ವಿನಯ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.