ಕರ್ನಾಟಕ

karnataka

ETV Bharat / state

RAF ಘಟಕ ಕಾಂಗ್ರೆಸ್‌ ಕೊಡುಗೆ, ನಿನ್ನೆ ಶಾ ಸುಳ್ಳು ಹೇಳಿದ್ದಾರೆ - ಮಾಜಿ ಡಿಸಿಎಂ ಪರಮೇಶ್ವರ್

ಪ್ರತಿದಿನ ನಾವು ಟೀಕೆ ಮಾಡುತ್ತಲೇ ಬಂದಿದ್ದೇವೆ. ಅವರು ಕಿವಿಗೆ ಹಾಕಿಕೊಳ್ಳುವುದಿಲ್ಲ ಅಂದರೆ ಏನು ಮಾಡುವುದು. ನಮ್ಮ ಪಕ್ಷದಲ್ಲಿ ಪ್ರಬುದ್ಧ ನಾಯಕರಿರುವಂತೆ ಬಿಜೆಪಿ ಪಕ್ಷದಲ್ಲಿಲ್ಲ. ನಮ್ಮ ಪಕ್ಷದಲ್ಲಿ ಪ್ರತಿಯೊಬ್ಬರು ಲೀಡರ್​ಗಳೇ ಅದನ್ನೇ ಗುಂಪುಗಾರಿಕೆ ಅಂದ್ರೆ ಹೇಗೆ?

ex dcm   prameswar pressmeet against amit sha
ಡಾ.ಜಿ ಪರಮೇಶ್ವರ್

By

Published : Jan 17, 2021, 5:28 PM IST

ಶಿವಮೊಗ್ಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಜಿಲ್ಲೆಗೆ ಬಂದು ಆರ್​ಎಎಫ್ ಘಟಕ ನಮ್ಮ ಕೊಡುಗೆ ಎಂದು ಸುಳ್ಳು ಹೇಳಿ ಹೋಗಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಕಿಡಿಕಾರಿದರು.

ಕೇಂದ್ರ ಸಚಿವ ಶಾ ವಿರುದ್ಧ ಮಾಜಿ ಡಿಸಿಎಂ ಕಿಡಿ..
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು​, ಅಮಿತ್ ಶಾ ಆರ್​ಎಎಫ್ ಘಟಕ ತನ್ನ ಕೊಡುಗೆ ಎಂದು ಹೇಳಿದ್ದಾರೆ. ಬಿಜೆಪಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಆರೋಪಿಸಿದ್ರು. ಆರ್​ಎಎಫ್ ಘಟಕ ಕಾಂಗ್ರೆಸ್ ಪಕ್ಷದ ಕೊಡುಗೆ. ನಾನು ಗೃಹ ಮಂತ್ರಿಯಾದ ಸಂದರ್ಭದಲ್ಲಿ ಆರ್​ಎಎಫ್ ಘಟಕದ ಬಗ್ಗೆ ಪ್ರಸ್ತಾವನೆ ಸಲ್ಲಿಸಿರುವುದಕ್ಕೆ ನಮ್ಮ ಬಳಿ ದಾಖಲೆಗಳಿವೆ ಎಂದು ಪರಮೇಶ್ವರ್​ ತಿಳಿಸಿದ್ರು.
ಅಮಿತ್ ಶಾ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ ಅನಿಸುತ್ತೆ, ಹಾಗಾಗಿ, ಸುಳ್ಳು ಹೇಳಿದ್ದಾರೆ. ನಾನು ಮಾಜಿ ಗೃಹ ಸಚಿವನಾಗಿ ಸ್ಪಷ್ಟನೆ ನೀಡುತ್ತಿದ್ದೇನೆ ಎಂದರು.

ನಿನ್ನೆ ವಿಐಎಸ್ಎಲ್ ಕುರಿತು ಮನವಿ ನೀಡಲು ಹೋದ ಕಾರ್ಮಿಕರನ್ನು ಹಾಗೂ ಕಾಂಗ್ರೆಸ್ ಮುಖಂಡರನ್ನು ಬಂಧಿಸಲಾಗಿದೆ. ಇವರು ನಮ್ಮ ಜಿಲ್ಲೆಗೆ ಬಂದು ನಮ್ಮ ಸಮಸ್ಯೆ ಕೇಳದೇ ಹೋದ್ರೆ ಇವರೆಂತಹ ಗೃಹ ಸಚಿವರು ಎಂದು ರೇಗಿದರು.

ರಾಜ್ಯದಲ್ಲಿ ವಿಪಕ್ಷ ಇಲ್ಲ ಎಂಬ ಕೆಲ ಬಿಜೆಪಿ ನಾಯಕರುಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್​, ಪ್ರತಿದಿನ ನಾವು ಟೀಕೆ ಮಾಡುತ್ತಲೇ ಬಂದಿದ್ದೇವೆ. ಅವರು ಕಿವಿಗೆ ಹಾಕಿಕೊಳ್ಳುವುದಿಲ್ಲ ಅಂದರೆ ಏನು ಮಾಡುವುದು. ನಮ್ಮ ಪಕ್ಷದಲ್ಲಿ ಪ್ರಬುದ್ಧ ನಾಯಕರಿರುವಂತೆ ಬಿಜೆಪಿ ಪಕ್ಷದಲ್ಲಿಲ್ಲ. ನಮ್ಮ ಪಕ್ಷದಲ್ಲಿ ಪ್ರತಿಯೊಬ್ಬರು ಲೀಡರ್​ಗಳೇ ಅದನ್ನೇ ಗುಂಪುಗಾರಿಕೆ ಅಂದರೆ ಹೇಗೆ ಎಂದು ಪ್ರಶ್ನಿಸಿದರು.

ಇತ್ತೀಚಿಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆಲುವು ಸಾಧಿಸಿದ್ದಾರೆ. ಆದರೆ, ಬಿಜೆಪಿಯವರು ನಾವು ಹೆಚ್ಚು ಗೆದ್ದಿದ್ದೇವೆ ಎಂದು ಸುಳ್ಳು ಅಂಕಿ-ಅಂಶಗಳನ್ನು ನೀಡುತ್ತಿದ್ದಾರೆ ಎಂದ್ರು.

ಇದನ್ನೂ ಓದಿ:ಅಮಿತ್ ಶಾ ಭೇಟಿಯಾದ ಅತೃಪ್ತ ಶಾಸಕ ಅರವಿಂದ ಬೆಲ್ಲದ: ದೆಹಲಿಗೆ ಬರುವಂತೆ ಸೂಚನೆ

For All Latest Updates

ABOUT THE AUTHOR

...view details