ಕರ್ನಾಟಕ

karnataka

ETV Bharat / state

ಇವಿಎಂ ಮತಯಂತ್ರ ದುರ್ಬಳಕೆ ವಿರುದ್ಧ ಪರಿವರ್ತನಾ ಯಾತ್ರೆ - ಬಹುಜನ ಕ್ರಾಂತಿ ಮೋರ್ಚಾ

ಇವಿಎಂ ಮತಯಂತ್ರ ದುರ್ಬಳಕೆ ವಿರುದ್ಧ ಬಹುಜನ ಕ್ರಾಂತಿ ಮೋರ್ಚಾ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಷ್ಟ್ರ ಮಟ್ಟದ ಪರಿವರ್ತನಾ ಯಾತ್ರೆ ಆಯೋಜಿಸಿದೆ.

ಪರಿವರ್ತನಾ ಯಾತ್ರೆ

By

Published : Sep 13, 2019, 9:54 AM IST

ಶಿವಮೊಗ್ಗ:ಚುನಾವಣೆ ಸಂದರ್ಭಗಳಲ್ಲಿ ಇವಿಎಂ ಮತ ಯಂತ್ರ ದುರ್ಬಳಕೆಯಾಗುತ್ತಿದೆ ಇದನ್ನು ರದ್ದುಮಾಡುವಂತೆ ಆಗ್ರಹಿಸಿ, ರಾಷ್ಟ್ರ ಮಟ್ಟದ ಪರಿವರ್ತನಾ ಯಾತ್ರೆ ಆಯೋಜಿಸಿದ್ದು, ಈ ಕುರಿತಂತೆ ಜಾಗೃತಿ ಸಭೆ ಆಯೋಜಿಸಲಾಗಿದೆ ಎಂದು ಬಹುಜನ ಕ್ರಾಂತಿ ಮೋರ್ಚಾದ ಮುಖ್ಯಸ್ಥ ಮಹಮ್ಮದ್ ಹುಸೇನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲೂ ಈ ರ್‍ಯಾಲಿ ನಡೆಯಲಿದ್ದು, ಶಿವಮೊಗ್ಗದಲ್ಲಿ ಸೆ.14ರಂದು ಸಂಜೆ 6:30ಕ್ಕೆ ರ್‍ಯಾಲಿ ನಡೆಯಲಿದೆ. ಜೊತೆಗೆ ಇಲಿಯಾಸ್ ನಗರ ಫರೋಕಿಯ ಶಾದಿಮಹಲ್​ನಲ್ಲಿ ಜಾಗೃತಿ ಸಭೆ ನಡೆಯಲಿದೆ ಎಂದು ತಿಳಿಸಿದರು.

ಇವಿಎಂ ಮತಯಂತ್ರ ದುರ್ಬಳಕೆ ವಿರುದ್ಧ ಪರಿವರ್ತನಾ ಯಾತ್ರೆ

ಬಹುಜನ ಕ್ರಾಂತಿ ಮೋರ್ಚಾದೊಂದಿಗೆ ಜೈಭೀಮ ಕನ್ನಡ ಸೇನೆ ಮತ್ತು ಇತರ ಪ್ರಗತಿಪರ ಸಂಘಟನೆಗಳು ಇದಕ್ಕೆ ಕೈ ಜೋಡಿಸಿವೆ ಎಂದು, ಬಹುಜನ ಕ್ರಾಂತಿ ಮೋರ್ಚಾದ ಮುಖ್ಯಸ್ಥ ಮಹಮ್ಮದ್ ಹುಸೇನ್ ತಿಳಿಸಿದರು.

ABOUT THE AUTHOR

...view details