ಕರ್ನಾಟಕ

karnataka

ETV Bharat / state

ಜಾತಿಗಣತಿ ಬಗ್ಗೆ ಕಾಂಗ್ರೆಸ್ ಈಗ ಮೊಸಳೆ ಕಣ್ಣೀರು ಸುರಿಸುತ್ತಿದೆ : ಸಚಿವ ಈಶ್ವರಪ್ಪ ವ್ಯಂಗ್ಯ

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜಾತಿ ಗಣತಿ ಮಂಡಿಸಲು ಸಹಕಾರ ನೀಡಲಿಲ್ಲಾ ಎಂದು ಆಪಾದನೇ ಮಾಡುವವರು ಆ ಸಂದರ್ಭದಲ್ಲಿ ರಾಜೀನಾಮೆ ಕೊಟ್ಟು ಬರಬೇಕಿತ್ತು. ನಾವು ಹಿಂದುಳಿದವರ ಪರ ಇದ್ದೇವೆ ಎನ್ನುತ್ತಿರುವ ಸಿದ್ದರಾಮಯ್ಯ ಅವರನ್ನು ಒಪ್ಪಿಕೊಳ್ಳುತ್ತಿದ್ದೆ..

By

Published : Sep 4, 2021, 2:37 PM IST

eshwarpap-
ಸಚಿವ ಈಶ್ವರಪ್ಪ

ಶಿವಮೊಗ್ಗ :ಜಾತಿಗಣತಿ ಬಗ್ಗೆ ನಾಟಕ ಮಾಡುತ್ತಾ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್‌ನವರು ದಲಿತರ, ಹಿಂದುಳಿದವರ ಪರವಾಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಎಲ್ಲಾ ಜಾತಿಯವರು ಕೆಲವರು ನಮಗೆ 2Aಗೆ ಸೇರಿಸಿ ಎನ್ನುತ್ತಿದ್ದರೆ, ಇನ್ನೂ ಕೆಲವರು ಎಸ್​​​ಟಿಗೆ ಸೇರಿಸಿ ಅಂತಿದ್ದಾರೆ. ಒಬ್ಬರು ಒಂದೊಂದು ಮೀಸಲಾತಿ ಕೇಳುತ್ತಿದ್ದಾರೆ. ಕೇಳೋದ್ರಲ್ಲಿ ತಪ್ಪಿಲ್ಲ ಎಂದರು.

ಜಾತಿಗಣತಿ ಬಗ್ಗೆ ಕಾಂಗ್ರೆಸ್ ಈಗ ಮೊಸಳೆ ಕಣ್ಣೀರು ಸುರಿಸುತ್ತಿದೆ : ಸಚಿವ ಈಶ್ವರಪ್ಪ

ಜಾತಿಗಣತಿ ಬಗ್ಗೆ ಪೂರ್ಣ ವಿಷಯ ಗೊತ್ತಿಲ್ಲ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿರುವುದಕ್ಕೆ ನನಗೆನೇ ಸ್ವಲ್ಪ ಸಂಕೋಚ ಆಗುತ್ತಿದೆ. ಅವರೇ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರೇ ಹಣ ಬಿಡುಗಡೆ ಮಾಡಿ ಕಾಂತರಾಜ್ ಅಧ್ಯಕ್ಷತೆಯಲ್ಲಿ ಸಮೀಕ್ಷೆ ಸಹ ನಡೆಸಿದ್ದರು. ನಂತರ ನಾನು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವುದರೊಳಗೆ ಜಾತಿ ಗಣತಿಯನ್ನು ವಿಧಾನ ಮಂಡಲದಲ್ಲಿ ಮಂಡಿಸುತ್ತೇನೆ ಎಂದಿದ್ದರು. ಆದರೆ, ಆ ಸಂದರ್ಭದಲ್ಲಿ ಯಾಕೆ ಮಂಡಿಸಲಿಲ್ಲಾ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜಾತಿ ಗಣತಿ ಮಂಡಿಸಲು ಸಹಕಾರ ನೀಡಲಿಲ್ಲಾ ಎಂದು ಆಪಾದನೇ ಮಾಡುವವರು ಆ ಸಂದರ್ಭದಲ್ಲಿ ರಾಜೀನಾಮೆ ಕೊಟ್ಟು ಬರಬೇಕಿತ್ತು. ನಾವು ಹಿಂದುಳಿದವರ ಪರ ಇದ್ದೇವೆ ಎನ್ನುತ್ತಿರುವ ಸಿದ್ದರಾಮಯ್ಯ ಅವರನ್ನು ಒಪ್ಪಿಕೊಳ್ಳುತ್ತಿದ್ದೆ. ಆದರೆ, ಅದನ್ನು ಬಿಟ್ಟು ಈಗ ಮೊಸಳೆ ಕಣ್ಣೀರು ಸುರಿಸುತ್ತಾ ಬಿಜೆಪಿಯವರು ಹಿಂದುಳಿದವರ, ದಲಿತರ ವಿರೋಧಿಗಳು. ಹಾಗಾಗಿ, ಅವರು ಜಾತಿ ಗಣತಿ ಮಂಡಿಸಲ್ಲ ಎಂದು ಆರೋಪ ಮಾಡುತ್ತಿದ್ದಾರೆ ಎಂದರು.

ಓದಿ:ಭೂ ಅಕ್ರಮ ಆರೋಪ: ಮರು ತನಿಖೆ ಮಾಡುವಂತೆ ಆದೇಶ ಹೊರಡಿಸಿದ ಸರ್ವೇ ಇಲಾಖೆ

ABOUT THE AUTHOR

...view details