ಶಿವಮೊಗ್ಗ:ಸಿಎಂ ಇಬ್ರಾಹಿಂ ಕುಡಿದು ಮಾತನಾಡಿರಬೇಕು, ನಾನು ಶಿವಮೊಗ್ಗದಲ್ಲಿ ಗೆದ್ದಾಗ ಒಂದೇ ಒಂದು ಗಲಾಟೆಗಳು ನಡೆದಿಲ್ಲ. ಆದ್ರೆ ಕಾಂಗ್ರೆಸ್ ಗೆದ್ದಾಗಲೆಲ್ಲಾ ಹಿಂದೂ- ಮುಸ್ಲಿಂ ಗಲಾಟೆ ನಡೆದಿವೆ ಎಂದು ಮಾಜಿ ಸಚಿವ ಕೆ ಎಸ್ಈ ಶ್ವರಪ್ಪ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಯಾವಾಗ ಗಲಾಟೆ ನಡೆದಿದೆ, ಯಾವಾಗ ನಡೆದಿಲ್ಲ ಎಂದು ಸಿಎಂ ಇಬ್ರಾಹಿಂ ತಿಳಿದುಕೊಂಡು ಮಾತನಾಡಲಿ. ನಾನು ಶಿವಮೊಗ್ಗದಲ್ಲಿ ಗೆದ್ದಾಗ, ಹಿಂದೂ- ಮುಸ್ಲಿಂ ಗಲಾಟೆಗಳು ನಡೆದಿಲ್ಲ. ಆದ್ರೆ ಕಾಂಗ್ರೆಸ್ ಗೆದ್ದಾಗಲೆಲ್ಲಾ ಗಲಾಟೆ ನಡೆದಿದೆ. ಜಿಲ್ಲೆಯಲ್ಲಿ ಹಿಂದು-ಮುಸ್ಲಿಮರು ಶಾಂತಿಯುತವಾಗಿದ್ದಾರೆ. ಆದರೆ ಸಿ.ಎಂ.ಇಬ್ರಾಹಿಂ, ಎಸ್ಡಿಪಿಐ ಹಾಗೂ ಪಿಎಫ್ಐನಂತಹವರು ಬಂದು ಗಲಾಟೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿದರು.