ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಪಕ್ಕಕ್ಕೆ ಸರಿಸಿ ಸಿಎಂ ಆಗಲು ಹೊರಟಿದ್ದಾರೆ. ಈ ಪಾದಯಾತ್ರೆ ಮೂಲಕ ರಾಜ್ಯದ ಜನತೆಗೆ ಕೋವಿಡ್ ಹಚ್ಚುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಯಾವುದೇ ಪಕ್ಷವಿರಲಿ, ಅವರ ಆರೋಗ್ಯ ಮುಖ್ಯ. ಈ ಒಂದೇ ಉದ್ದೇಶದಿಂದ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ ಎಂದು ಅವರಿಗೆ ಹೇಳುತ್ತಿದ್ದೇವೆ. ಆದರೆ, ಕಾಂಗ್ರೆಸ್ನವರಿಗೆ ರಾಜಕೀಯವೇ ಮುಖ್ಯವಾಗಿದೆ. ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್ ಹೋಗದೆ ಇರುವುದು ಸಂತೋಷ ತಂದಿದೆ ಎಂದರು.
ಕೋವಿಡ್ ನಿಯಮ ಪಾಲನೆ ಮಾಡ್ತಾ ಇದ್ದೇವೆ. 1 ಲಕ್ಷ ಮಾಸ್ಕ್ ವಿತರಣೆ ಮಾಡ್ತೇವೆ, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತೇವೆ ಎಂದು ಹೇಳಿದ್ದ ಡಿಕೆಶಿಯೇ ಮಾಸ್ಕ್ ಧರಿಸಿರಲಿಲ್ಲ. ಇನ್ನು ಇವರೇನ್ ಕೋವಿಡ್ ನಿಯಮ ಪಾಲನೆ ಮಾಡ್ತಾರೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮೈಸೂರು: ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ಮುಸ್ಲಿಂ ಸಂಘಟನೆ
ಕೋವಿಡ್ ಟೆಸ್ಟ್ ಗೆ ಬಂದ ಅಧಿಕಾರಿಗಳನ್ನು ಬೈಯುತ್ತಿರಿ, ಇದು ಒಂದು ರೀತಿ ದಾದಾಗಿರಿ, ಗೂಂಡಾಗಿರಿ ಆಗಿದೆ. ಗೂಂಡಾಗಿರಿಯನ್ನು ಡಿ.ಕೆ. ಶಿವಕುಮಾರ್ ಮಾಡ್ತಾ ಇದ್ದರು ಅಂತ ಮುಂಚೆ ಕೇಳ್ತಾ ಇದ್ದೆ, ಈಗ ನೋಡಿದೆ ಎಂದ ಅವರು, ಈಗಲೂ ಕಾಲ ಮಿಂಚಿಲ್ಲ. ಮೇಕೆದಾಟು ಪಾದಯಾತ್ರೆಯನ್ನು ಕೋವಿಡ್ ಮುಗಿದ ಮೇಲೆ ಲಕ್ಷಗಟ್ಟಲೇ ಜನ ಸೇರಿಸಿ ಮಾಡಿ, ನಾವು ಬೇಡ ಅನ್ನೋದಿಲ್ಲ. ಈಗ ನಿಮ್ಮ ಶಕ್ತಿ ಪ್ರದರ್ಶನ ಮಾಡಲು ಹೋಗಬೇಡಿ ಎಂದು ಹೇಳಿದ್ರು.