ಕರ್ನಾಟಕ

karnataka

ETV Bharat / state

ಈಶ್ವರಪ್ಪನವರು ಕೇವಲ ಸಭೆಗಳಿಗೆ ಸೀಮಿತವಾಗಿದ್ದಾರೆ: ಕೆ.ಬಿ.ಪ್ರಸನ್ನ ಕುಮಾರ್ - shimogga news

ಸಚಿವರಾದ ಈಶ್ವರಪ್ಪನವರು ಕೇವಲ ಸಭೆಗಳಿಗೆ ಮೀಸಲಾಗಿದ್ದಾರೆ. ಶಿವಮೊಗ್ಗ ನಗರದ ಅಭಿವೃದ್ಧಿಗೆ ಬಂದ ಹಣ ಮಹಾನಗರ ಪಾಲಿಕೆಯಿಂದ ವಾಪಸ್ ಹೋಗುತ್ತಿದೆ. ಈಶ್ವರಪ್ಪನವರು ಆ ಹಣವನ್ನು ವಾಪಸ್​​ ತರಿಸಿ ನಗರದ ಅಭಿವೃದ್ಧಿಗೆ ಶಕ್ತಿ ನೀಡಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್​ ಕುಮಾರ್ ಆಗ್ರಹಿಸಿದರು.

ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್
ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್

By

Published : Jul 9, 2020, 7:29 PM IST

ಶಿವಮೊಗ್ಗ:ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ಈ ಕುರಿತು ಗಮನ ಹರಿಸದೆ ಕೇವಲ ಸಭೆಗಳಿಗೆ ಮೀಸಲಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್​ ಕುಮಾರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಗ್ಗಾನ್ ಆಸ್ಪತ್ರೆ ಹಾಗೂ ಗಾಜನೂರಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಬಿಸಿ ನೀರು ಸಹ ನೀಡುತ್ತಿಲ್ಲ ಎಂದು ಕರೆ ಮಾಡಿ ತಿಳಿಸುತ್ತಿದ್ದಾರೆ. ಹಾಗಾಗಿ ಸಚಿವರಾದ ಈಶ್ವರಪ್ಪನವರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಈ ಕುರಿತು ಜಿಲ್ಲಾ ಆರೋಗ್ಯಧಿಕಾರಿಗಳಿಗೆ ಗಟ್ಟಿ ಧ್ವನಿಯಲ್ಲಿಯೇ ಮಾತನಾಡಿದ್ದೇನೆ ಎಂದರು.

ಕೆ.ಬಿ.ಪ್ರಸನ್ನ ಕುಮಾರ್​, ಮಾಜಿ ಶಾಸಕ

ಶಿವಮೊಗ್ಗ ನಗರದ ಅಭಿವೃದ್ಧಿಗೆ ಬಂದ ಹಣ ಮಹಾನಗರ ಪಾಲಿಕೆಯಿಂದ ವಾಪಸ್ ಹೋಗುತ್ತಿದೆ. ಸ್ಮಾರ್ಟ್ ಸಿಟಿ ಹೊರತುಪಡಿಸಿ ಉಳಿದ ವಾರ್ಡ್​ಗಳ ಅಭಿವೃದ್ಧಿಗೆ ಹಣ ಬಳಕೆಯಾಗದೆ, ವಾಪಸ್​​ ಹೋಗಿದೆ. ಹಾಗಾಗಿ ಪ್ರಭಾವಿ ಸಚಿವರಾಗಿರುವ ಈಶ್ವರಪ್ಪನವರು ಆ ಹಣವನ್ನು ವಾಪಸ್​​ ತರಿಸಿ ನಗರದ ಅಭಿವೃದ್ಧಿಗೆ ಶಕ್ತಿ ನೀಡಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪನವರು, ಸಿದ್ದರಾಮಯ್ಯ ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ ಎಂದಿದ್ದಾರೆ. ಆದರೆ ಸಿದ್ದರಾಮಯ್ಯನವರಿಗೆ ಗಾಳಿಯಲ್ಲಿ ಗುಂಡು ಹೊಡೆಯುವ ಅಭ್ಯಾಸ ಇಲ್ಲ. ಈ ಅಭ್ಯಾಸ ಇರೋದು ಈಶ್ವರಪ್ಪನವರಿಗೆ ಎಂದು ಪ್ರಸನ್ನ ಕುಮಾರ್​​ ತೀರಗೇಟು ನೀಡಿದ್ದಾರೆ.

ABOUT THE AUTHOR

...view details