ಶಿವಮೊಗ್ಗ:ಅದೆಷ್ಟೇ ಗೊಂದಲವನ್ನು ನೀವು ಹುಟ್ಟಿಸಿದರು ನನ್ನ ಹಾಗೂ ಯಡಿಯೂರಪ್ಪರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲವೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಗುಡುಗಿದ್ದಾರೆ.
ನನ್ನ ಯಡಿಯೂರಪ್ಪ ಅವರನ್ನ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಈಶ್ವರಪ್ಪ - Shivamogga district news
ಯಾವುದೇ ರೀತಿ ನೋವನ್ನು ಮಾಡಿಕೊಂಡು ತಂತಿ ಮೇಲೆ ನಡೆಯುವ ಪರಿಸ್ಥಿತಿ ಬರುತ್ತದೆ ಎಂದು ತಿಳಿಯಬೇಡಿ. ನಿಮ್ಮ ಜೊತೆ ಭಾರತೀಯ ಜನತಾ ಪಕ್ಷ ಇದೆ. ನನ್ನ ನಿಮ್ಮ ನಡುವೆ ಜಗಳ ತಂದಿಡುವ ಪ್ರಯತ್ನ ನಡೀತಿದೆ. ಆದ್ರೆ ನಮ್ಮಿಬ್ಬರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲವೆಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
![ನನ್ನ ಯಡಿಯೂರಪ್ಪ ಅವರನ್ನ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಈಶ್ವರಪ್ಪ](https://etvbharatimages.akamaized.net/etvbharat/prod-images/768-512-4608459-thumbnail-3x2-eshwarappa.jpg)
ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರೆ ಈ ರೀತಿಯ ಗೊಂದಲ ಸೃಷ್ಟಿಸುವ ಜನರ ಮಾತನ್ನ ನಂಬಬೇಡಿ, ಯಾವುದೇ ರೀತಿ ನೋವನ್ನು ಮಾಡಿಕೊಂಡು ತಂತಿ ಮೇಲೆ ನಡೆಯುವ ಪರಿಸ್ಥಿತಿ ಇದೆ ಎಂದು ತಿಳಿಯಬೇಡಿ. ನಿಮ್ಮ ಜೊತೆ ಭಾರತೀಯ ಜನತಾ ಪಾರ್ಟಿ ಇದೆ. ನನ್ನ-ನಿಮ್ಮ ನಡುವೆ ಜಗಳ ತಂದಿಡುವ ಪ್ರಯತ್ನ ನಡೀತಿದೆ. ಆದ್ರೆ ನಮ್ಮಿಬ್ಬರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಚುನಾವಣೆ ನಡೆದರೇ 150 ಕ್ಕೂ ಅಧಿಕ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ. ಬಿಎಸ್ವೈ ಹಾಗೂ ಸಂಘಟನೆ ನೇತೃತ್ವದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಈಗಿರುವ ಖಾತೆ ಹೆಚ್ಚು ಜವಾಬ್ದಾರಿ ಇರುವಾಗ ಮತ್ತೊಂದು ಖಾತೆ ನಿರ್ವಹಣೆ ಕಷ್ಟಸಾಧ್ಯ. ಹಾಗಿರುವಾಗ ಸಿಎಂ ಜೊತೆ ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದೆ. ಇದನ್ನೂ ಸಹ ಮಾಧ್ಯಮಗಳು ತಿರುಚಿವೆ. ಸಿಎಂ ಬಯಸಿದರೆ ಕ್ರೀಡಾ ಖಾತೆಯಲ್ಲಿ ಮುಂದುವರೆಯುತ್ತೇನೆ ಎಂದು ಇದೇ ವೇಳೆ ಈಶ್ವರಪ್ಪ ತಮ್ಮ ಮನದಾಳ ಬಿಚ್ಚಿಟ್ಟರು.