ಶಿವಮೊಗ್ಗ:ಯಡಿಯೂರಪ್ಪನವರು ತಂತಿ ಮೇಲೆ ನಡೆಯುತ್ತಿದ್ದೇನೆ ಎಂದಿದಕ್ಕೆ ರಾಜೀನಾಮೆ ನೀಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಡಿಯೂರಪ್ಪನವರು ತಂತಿ ಮೇಲಿನ ನಡಿಗೆ ನನ್ನದು ಎಂದಿದ್ದು ಜನರ ಕಷ್ಟ ನೋಡಿಯೇ ಹೊರತು, ಬೇರಾವುದಕ್ಕೂ ಅಲ್ಲ ಎಂದು ಟಗರು ವಿರುದ್ದ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ಸರ್ಕಾರದ ಆಡಳಿತ ನೋಡಲಾಗದೆ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಯಡಿಯೂರಪ್ಪನವರು ರಾಜೀನಾಮೆ ಕೊಟ್ಟರೆ ನೀವು ಸಿಎಂ ಆಗಬಹುದುಬ ಎಂಬ ಆಸೆ ಬಿಡಿ. ನಿಮಗೆ ವಿರೋಧ ಪಕ್ಷದ ನಾಯಕ ಸ್ಥಾನವೂ ದೊರೆತಿಲ್ಲ. ಯಡಿಯೂರಪ್ಪನವರು ತಂತಿ ಮೇಲೆ ನಡೀತಿದ್ರೆ ನಿಮ್ಮ ಕಾಂಗ್ರೆಸ್ ಪಕ್ಷದ ಶಾಸಕರು ಆ ತಂತಿ ಬೇಲಿಯನ್ನು ಹಾರಿ ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ನಿಮ್ಮ ಪಕ್ಷವನ್ನು ಮೊದಲು ನೀವು ನೋಡಿಕೊಳ್ಳಿ ಎಂದು ಸಿದ್ದರಾಮಯ್ಯ ವಿರುದ್ದ ಕೆಂಡಕಾರಿದ್ದಾರೆ.