ಕರ್ನಾಟಕ

karnataka

ETV Bharat / state

ಜೆಸಿ‌ ಆಸ್ಪತ್ರೆಗೆ ಉದ್ಯಮಿಗಳಿಂದ ಕಾನ್ಸಂಟ್ರೇಟರ್, ಆ್ಯಂಬುಲೆನ್ಸ್​ ಕೊಡುಗೆ - oxygen concentrators to jc hospital

ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿರುವ ತೀರ್ಥಹಳ್ಳಿಯ ಉದ್ಯಮಿಗಳು ತಮ್ಮ ತಾಲೂಕಿನ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ಉಚಿತವಾಗಿ ನೀಡಿದ್ದಾರೆ. ಅದೇ ರೀತಿ ಆ್ಯಂಬುಲೆನ್ಸ್ ಅನ್ನು ಸಹ ಕೊಡುಗೆಯಾಗಿ ನೀಡಿದ್ದಾರೆ.

shimogha
shimogha

By

Published : May 23, 2021, 7:03 PM IST

ಶಿವಮೊಗ್ಗ: ಬೆಂಗಳೂರಿನಲ್ಲಿ‌ ಉದ್ಯಮಿಯಾಗಿರುವ ಹಾರೋಗದ್ದೆಯ ರಾಹುಲ್​ರವರು ತೀರ್ಥಹಳ್ಳಿಯ‌ ಜಯಚಾಮರಾಜೇಂದ್ರ ಒಡೆಯರ್ ಆಸ್ಪತ್ರೆಗೆ 8 ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ಉಚಿತವಾಗಿ ನೀಡಿದ್ದಾರೆ.

ಹಾಗೆಯೇ ಬೆಂಗಳೂರಿನಲ್ಲಿ ನೆಲೆಸಿರುವ ಮತ್ತೋರ್ವ ಉದ್ಯಮಿ ಹೊಸಕೊಪ್ಪದ ಅಚ್ಯುತ್​​ರವರು ತಮ್ಮ ಶಿಲ್ಪ ಫೌಂಡೇಷನ್​ ವತಿಯಿಂದ ಕೋವಿಡ್ ರೋಗಿಗಳ ಅನುಕೂಲಕ್ಕಾಗಿ ಒಂದು ಆ್ಯಂಬುಲೆನ್ಸ್ ವಾಹನ ನೀಡಿ ಅದರ ಚಾಲಕರ ವೇತನ ಮತ್ತು ವಾಹನದ ಡೀಸೆಲ್ ವೆಚ್ಚವನ್ನು ಭರಿಸುವ ಉದಾರತೆ ತೋರಿದ್ದಾರೆ. ಕೊರೊನಾ ಸಮಯದಲ್ಲಿ ಸಹಾಯ ಹಸ್ತ ಚಾಚಿದ ಉದ್ಯಮಿಗಳಾದ ರಾಹುಲ್ ಹಾಗೂ ಅಚ್ಯುತ್ ರವರಿಗೆ ಶಾಸಕ ಆರಗ ಜ್ಞಾನೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಶಾಸಕರು ಕೊರೊನಾ‌ ಪಾಸಿಟಿವ್ ಇರುವ ಕುಟುಂಬದವರು ಐಸೋಲೇಷನ್ ಆಗುವ ಬದಲು ಮಾನವ ಬಾಂಬ್​ಗಳ ರೀತಿ ತಿರುಗಾಡುತ್ತಿರುವುದೇ ಕೊರೊನಾ ಹೆಚ್ಚಾಗಲು ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

For All Latest Updates

ABOUT THE AUTHOR

...view details