ಕರ್ನಾಟಕ

karnataka

ETV Bharat / state

'ಹಸಿರುತಾಣ'ವಾದ ಬಂಜರು ಭೂಮಿ: ಶಿವಮೊಗ್ಗ ಉದ್ಯಮಿಯ ಪರಿಶ್ರಮದ 'ಉಷಾ ಕಿರಣ' - Shivamogga

ಬೆಂಗಳೂರಿನ ಉದ್ಯಮಿ ಸುರೇಶ್ ಕುಮಾರ್, 10 ವರ್ಷಗಳ ಹಿಂದೆ ಶಿವಮೊಗ್ಗದ ಸಾಗರದಲ್ಲಿ 21 ಎಕರೆ ಬಂಜರು ಭೂಮಿಯನ್ನು ಖರೀದಿಸಿದ್ದರು. ಆ ಪ್ರದೇಶವನ್ನು ಅರಣ್ಯವನ್ನಾಗಿ ಮಾಡಬೇಕೆಂದು ಪಣತೊಟ್ಟ ಅವರು ಖ್ಯಾತ ಪರಿಸರವಾದಿ ಅಖಿಲೇಶ್ ಚಿಪ್ಲಿ ಅವರ ಸಹಾಯದಿಂದ ಹಸಿರು ತಾಣವಾಗಿ ನಿರ್ಮಾಣ ಮಾಡಿದ್ದಾರೆ.

forest in Karnataka
'ಹಸಿರುತಾಣ'ವಾದ ಬಂಜರು ಭೂಮಿ

By

Published : Jul 5, 2021, 9:54 AM IST

Updated : Jul 5, 2021, 12:09 PM IST

ಶಿವಮೊಗ್ಗ: 10 ವರ್ಷಗಳ ಹಿಂದೆ ಮರುಭೂಮಿಯಂತಿದ್ದ ಪ್ರದೇಶವನ್ನು ಬೆಂಗಳೂರು ಮೂಲದ ಉದ್ಯಮಿಯೊಬ್ಬರು ದಟ್ಟ ಅರಣ್ಯವಾಗಿ ಪರಿವರ್ತಿಸಿದ್ದಾರೆ. ಜಿಲ್ಲೆಯ ಸಾಗರದಲ್ಲಿ ಖರೀದಿಸಿದ್ದ 21 ಎಕರೆ ಬಂಜರು ಭೂಮಿಯನ್ನು ಹಚ್ಚ ಹಸಿರಿನ ತಾಣವಾಗಿ ಮಾರ್ಪಾಡು ಮಾಡುವಲ್ಲಿ ಶ್ರಮ ವಹಿಸಿದ್ದಾರೆ.

ಬೆಂಗಳೂರಿನ ಉದ್ಯಮಿ ಸುರೇಶ್ ಕುಮಾರ್, 10 ವರ್ಷಗಳ ಹಿಂದೆ ಶಿವಮೊಗ್ಗದ ಸಾಗರದಲ್ಲಿ 21 ಎಕರೆ ಬಂಜರು ಭೂಮಿಯನ್ನು ಖರೀದಿಸಿದ್ದರು. ಆ ಪ್ರದೇಶವನ್ನು ಅರಣ್ಯವನ್ನಾಗಿ ಮಾಡಬೇಕೆಂದು ಪಣತೊಟ್ಟ ಅವರು ಖ್ಯಾತ ಪರಿಸರವಾದಿ ಅಖಿಲೇಶ್ ಚಿಪ್ಲಿ ಅವರ ಸಹಾಯದಿಂದ ಹಸಿರು ತಾಣವಾಗಿ ನಿರ್ಮಾಣ ಮಾಡಿದ್ದಾರೆ.

'ಹಸಿರುತಾಣ'ವಾದ ಬಂಜರು ಭೂಮಿ

ಈ ಬಗ್ಗೆ ಮಾತನಾಡಿದ ಪರಿಸರವಾದಿ ಅಖಿಲೇಶ್ ಚಿಪ್ಲಿ "ಈ ಅರಣ್ಯಕ್ಕೆ 'ಉಷಾ ಕಿರಣ' (ಬೆಳಗಿನ ಸೂರ್ಯನ ಕಿರಣಗಳು) ಎಂದು ಹೆಸರಿಡಲಾಗಿದೆ. ಇದು ಹಸಿರು ಉಪಕ್ರಮದ ಮಾದರಿಯಾಗಿದೆ. 10 ವರ್ಷಗಳ ಹಿಂದೆ ಈ ಪ್ರದೇಶ ನೋಡಲು ಮರುಭೂಮಿಯಂತಿತ್ತು. ಆದರೆ ಈಗ ಹಸಿರಿನಿಂದ ಕಂಗೊಳಿಸುತ್ತಿದೆ. ಸುರೇಶ್​ ಕುಮಾರ್​ ಅವರು ಈ ಪ್ರದೇಶದಲ್ಲಿ ನೀಲಗಿರಿ ಮತ್ತು ಅಕೇಶಿಯ ಮರಗಳನ್ನು ಬೆಳೆಸಿದ್ದಾರೆ. ಸುರೇಶ್ ಕುಮಾರ್ ಅವರ ಸಾಮಾಜಿಕ ಕಳಕಳಿಯಿಂದ ಇದು ಸಾಧ್ಯವಾಯಿತು" ಎಂದು ಹೇಳಿದರು.

"10 ವರ್ಷಗಳ ನಿರಂತರ ಪರಿಶ್ರಮದ ಬಳಿಕ ಇದು ಪಶ್ಚಿಮ ಘಟ್ಟದ ​​ಸ್ಥಳೀಯ ಪ್ರಭೇದಗಳನ್ನು ಹೊಂದಿರುವ ನೈಸರ್ಗಿಕ ಅರಣ್ಯವಾಗಿ ರೂಪಾಂತರಗೊಂಡಿದೆ. ಅಷ್ಟೇ ಅಲ್ಲದೆ ಈ ಪ್ರದೇಶ ಪರಿಸರವಾದಿಗಳು ಮತ್ತು ವಿದ್ಯಾರ್ಥಿಗಳಿಗೆ ಅಧ್ಯಯನ ಕೇಂದ್ರವಾಗಿ ಮಾರ್ಪಟ್ಟಿದೆ. ಪಕ್ಷಿ ಛಾಯಾಗ್ರಹಣ ಉತ್ಸಾಹಿಗಳು ಇಲ್ಲಿಗೆ ಆಗಮಿಸುತ್ತಾರೆ. ಸ್ಥಳೀಯ ಸಸ್ಯ ಪ್ರಭೇದ ಮತ್ತು ಪ್ರಾಣಿಗಳನ್ನು ಉಳಿಸಲು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇಂತಹ ಯೋಜನೆಗಳು ಅವಶ್ಯಕವಾಗಿವೆ" ಎಂದು ವಿವರಿಸಿದರು.

"ಅರಣ್ಯದಲ್ಲಿ ಹೆಚ್ಚಿನ ಸಸ್ಯಗಳು ನೈಸರ್ಗಿಕವಾಗಿ ಬೆಳೆಯುತ್ತಿವೆ. ಅದನ್ನು ರಕ್ಷಿಸಬೇಕಿದೆ. ಆ ಕಾರ್ಯವನ್ನು ಪ್ರಸ್ತುತ ನಾವು ಮಾಡುತ್ತಿದ್ದೇವೆ. ಇದು ಪಶ್ಚಿಮ ಘಟ್ಟದ ​​ಕಾಡಿನ ಸೌಂದರ್ಯ ವೃದ್ಧಿಸುತ್ತದೆ" ಎಂದು ಅವರು ಹೇಳಿದರು.

Last Updated : Jul 5, 2021, 12:09 PM IST

ABOUT THE AUTHOR

...view details