ಕರ್ನಾಟಕ

karnataka

ETV Bharat / state

ಅಂಬೇಡ್ಕರ್ ಭವನದಲ್ಲಿ 'ಡ್ಯಾಷ್ ಶೀರ್ಷಿಕೆ ನಿಮಗೆ ಬಿಟ್ಟಿದ್ದು' ಸಿನಿಮಾ ಪ್ರದರ್ಶನ - undefined

ಇಂಜಿನಿಯರ್​ ವಿದ್ಯಾರ್ಥಿಗಳೆ ನಟಿಸಿ ನಿರ್ಮಿಸಿರುವ ಒಂದು ಗಂಟೆಯ ಸಿನಿಮಾ 'ಡ್ಯಾಷ್ ಶೀರ್ಷಿಕೆ ನಿಮಗೆ ಬಿಟ್ಟಿದ್ದು' ನಿರ್ದೇಶನ ಮಾಡಿದ್ದು, ಇಂದು ನಗರದ ಅಂಬೇಡ್ಕರ್​ ಭವನದಲ್ಲಿ ಅದರ ಪ್ರದರ್ಶನ ಆಯೋಜಿಸಲಾಗಿದೆ.

ಪ್ರೆಸ್​ಮೀಡ್​

By

Published : Apr 10, 2019, 2:31 PM IST

ಶಿವಮೊಗ್ಗ: ‌ 'ಡ್ಯಾಷ್ ಶೀರ್ಷಿಕೆ ನಿಮಗೆ ಬಿಟ್ಟಿದ್ದು' ಎಂಬ ಸಿನಿಮಾವನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ಮಿಸಿದ್ದು, ಈ ಸಿನಿಮಾವನ್ನು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಮನೋಜ್ ಮುಜುಂದಾರ್ ತಿಳಿಸಿದರು.

ಪ್ರೆಸ್​ಮೀಡ್​

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಸಿನಿಮಾವನ್ನು ಮಿಲಿಯನ್ಸ್ ಸ್ಟುಡಿಯೋಸ್ ವತಿಯಿಂದ ಪೆಸಿಟ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ವಿದ್ಯಾರ್ಥಿಗಳೆ ನಟಿಸಿದ್ದಾರೆ. ಕಥೆಯೆ ಚಿತ್ರದ ನಾಯಕ. ಚಿತ್ರದಲ್ಲಿ ಒಂದು ಹಾಡು ಇದ್ದು, ಇದೊಂದು ವಿನೂತನ ಪ್ರಯತ್ನವಾಗಿದೆ ಎಂದರು.

ಇದೊಂದು ಮಾನಸಿಕ ಕಥೆಗೆ ಸಂಬಂಧಿಸಿದ ಚಿತ್ರವಾಗಿದ್ದು, ವರ್ಚುವಲ್ ರಿಯಾಲಿಟಿಯಲ್ಲಿ ಚಿತ್ರ ಸಾಗುತ್ತದೆ. ಇದರಲ್ಲಿ ಸುಮಾರು 60 ಮಂದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ಮನಸುಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಿದರೆ ಮುಂದೆ ಸಹ ಇಂತಹ ಚಿತ್ರಗಳನ್ನು ಮಾಡಲು ಸಹಕಾರ, ಬೆಂಬಲ, ಧೈರ್ಯ ದೊರೆಯುತ್ತದೆ. ಚಿತ್ರದ ಚಿತ್ರೀಕರಣ ಶಿವಮೊಗ್ಗದ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದಿದ್ದು, ಪ್ರತಿಯೊಬ್ಬರೂ ಈ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿಕೊಂಡರು.

For All Latest Updates

TAGGED:

ABOUT THE AUTHOR

...view details