ಶಿವಮೊಗ್ಗ:ಪ್ರತೀ ವರ್ಷ ಮೈಸೂರಿನಂತೆ ಶಿವಮೊಗ್ಗದಲ್ಲೂ ಜಂಬೂ ಸವಾರಿ ನಡೆಸಲಾಗುತ್ತಿದ್ದು, ಮಹಾನಗರ ಪಾಲಿಕೆ ವತಿಯಿಂದ ದಸರಾ ಉತ್ಸವಕ್ಕೆ ಆನೆಗಳಿಗೆ ಸಂಪ್ರದಾಯಿಕವಾಗಿ ಆಹ್ವಾನ ನೀಡಲಾಯಿತು.
ದಸರಾ ಜಂಬೂ ಸವಾರಿಗಾಗಿ ಸಕ್ರೆಬೈಲು ಆನೆ ಬಿಡಾರದಿಂದ ಬಂದ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ಈ ಬಾರಿ ಪಾಲಿಕೆಯಿಂದಲೇ ಸರಳ ದಸರಾ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹೆಚ್ಚಿನ ಜನ ಸೇರುವಂತಿಲ್ಲವಾದ ಕಾರಣ ಮೆರವಣಿಗೆ ನಡೆಸದಿರಲು ನಿರ್ಧರಿಸಲಾಗಿದೆ.