ಶಿವಮೊಗ್ಗ:ಚಾರ್ಜ್ಗೆ ಇಟ್ಟಿದ್ದ ಎಲೆಕ್ಟ್ರಿಕ್ ಬೈಕ್ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕು ನಿಂಬೆಗೊಂದಿ ಗ್ರಾಮದಲ್ಲಿ ನಡೆದಿದೆ.
ನಿಂದಿಗೊಂದಿಯ ಮಲ್ಲಿಕಾರ್ಜುನ್ ಎಂಬುವವರು ತಮ್ಮ ಅಡಕೆ ಮನೆಯಲ್ಲಿ ರಾತ್ರಿ ಎಲೆಕ್ಟ್ರಿಕ್ ಬೈಕ್ ಅನ್ನು ಚಾರ್ಜ್ಗೆ ಹಾಕಿ ಮಲಗಿದ್ದರು. ಚಾರ್ಜ್ಗೆ ಹಾಕಿದ ಒಂದು ಗಂಟೆಯಲ್ಲಿ ಬೈಕ್ ಬೆಂಕಿಗಾಹುತಿಯಾಗಿದೆ.
ಬೈಕ್ ಬಳಿ ಮಲಗಿದ್ದ ಮಲ್ಲಿಕಾರ್ಜುನ್ ಎದ್ದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ, ಬೆಂಕಿಯಿಂದ ಬೈಕ್ ಸಂಪೂರ್ಣ ಸುಟ್ಟು ಹೋಗಿತ್ತು. ಇದರ ಜೊತೆಗೆ ಪಕ್ಕದ ಹಾಸಿಗೆಗೂ ಸಹ ಬೆಂಕಿ ತಗುಲಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ರಾಜ್ಯದ 75 ಕಡೆ ಎಸಿಬಿ ದಾಳಿ.. 18 ಸರ್ಕಾರಿ ಅಧಿಕಾರಿಗಳ ದಾಖಲೆ ಪರಿಶೀಲಿಸುತ್ತಿರುವ ACB ಸಿಬ್ಬಂದಿ!