ಶಿವಮೊಗ್ಗ:ಗಣೇಶೋತ್ಸವಕ್ಕೆ ಅಡ್ಡಿಪಡಿಸುವವರು ಅನುಭವಿಸುತ್ತಾರೆ. ನಾವು ಮುಸ್ಲಿಮರ ಹಬ್ಬಗಳಿಗೆ ಅಡ್ಡ ಬಂದಿಲ್ಲ. ಹಿಂದೂಗಳ ಗಣಪತಿ ಹಬ್ಬಕ್ಕೆ ಅಡ್ಡ ಬಂದ್ರೆ ಸರಿಯಾದ ಬೆಲೆ ತೆರಬೇಕಾಗುತ್ತದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಎನ್ನುವ ಕೆಟ್ಟ ಪದ ಕೇಳಿ ನನಗೆ ಸಾಕಾಗಿದೆ. ಆ ಕೆಟ್ಟ ಹೆಸರನ್ನು ನನ್ನ ಬಾಯಲ್ಲಿ ಏಕೆ ಹೇಳಿಸುತ್ತೀರಾ ಎಂದು ಮಾಧ್ಯಮದವರಿಗೆ ಹಾಸ್ಯವಾಗಿ ಪ್ರಶ್ನಿಸಿದರು. ಅವರ ಬಗ್ಗೆ ಮುಂಚೆ ಸ್ವಲ್ಪ ಗೌರವವಿತ್ತು. ಯಾವಾಗ ಮುಸ್ಲಿಮರ ಜಾಗದಲ್ಲಿ ವೀರ ಸಾವರ್ಕರ್ ಫೋಟೋ ಯಾಕಿಟ್ಟರು ಅಂತಾ ಕೇಳಿದ್ರೋ, ಆಗಿನಿಂದ ಆ ಗೌರವ ಹೋಯಿತು. ಆ ಹೆಸರು ಹೇಳಿದ್ರೆ ನನ್ನ ಬಾಯಲ್ಲಿ ಹುಳ ಬೀಳುತ್ತದೆ ಅನ್ನಿಸುತ್ತದೆ ಎಂದರು.
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಎಚ್ಚರಿಕೆ ಸ್ವತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಫೋಟೋವನ್ನು ಮುಸ್ಲಿಮರು ಇರುವ ಜಾಗದಲ್ಲಿ ಏಕೆ ಇಡಬೇಕಿತ್ತು ಅಂತ ಕೇಳಿದ್ದಾರಲ್ಲ. ಇಂತಹ ರಾಷ್ಟ್ರದ್ರೋಹಿಯನ್ನು ನನ್ನ ಜೀವನದಲ್ಲಿಯೇ ನೋಡಿಲ್ಲ. ಮುಸಲ್ಮಾನರ ಓಟಿಗಾಗಿ ಏನ್ ಬೇಕಾದರೂ ಮಾಡುತ್ತೇವೆ ಎಂಬ ಪರಿಸ್ಥಿತಿ ಅವರಿಗೆ ಬಂತಲ್ಲ. ಇದು ನಮ್ಮ ದೇಶ, ರಾಜ್ಯದ ದುರ್ದೈವ. ಇಂತಹ ಮುಖ್ಯಮಂತ್ರಿಯನ್ನು ಕಂಡಿದ್ದೀವಲ್ಲ. ಮುಂದಿನ ಚುನಾವಣೆಯಲ್ಲಿ ಇಂತಹವರಿಗೆ ಏನ್ ಉತ್ತರ ಕೊಡುಬೇಕೋ ಅದನ್ನು ನಮ್ಮ ರಾಜ್ಯದ ಜನತೆ ಕೊಡ್ತಾರೆ ಎಂದರು.
ಇದನ್ನೂ ಓದಿ:ಕಾಲಿಗೆ ಗುಂಡು ಹೊಡೆದಿರುವುದು ಒಂದು ಸ್ಯಾಂಪಲ್ ಅಷ್ಟೇ: ಕೆ.ಎಸ್.ಈಶ್ವರಪ್ಪ
SDPI ಮತ್ತು PFI ಬ್ಯಾನ್ ವಿಚಾರ: SDPI ಹಾಗೂ PFI ಬ್ಯಾನ್ ಮಾಡಲು ಸಿದ್ದರಾಮಯ್ಯನವರ ಒಪ್ಪಿಗೆ ಬೇಕಾಗಿಲ್ಲ. ಯಾವಾಗ ಬ್ಯಾನ್ ಮಾಡಬೇಕೋ ಅವಾಗ ಅದನ್ನು ಬ್ಯಾನ್ ಮಾಡುತ್ತಾರೆ. ಈ ಸಂಘಟನೆಗಳು ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿವೆ ಎಂದು ಹೇಳಿದರು.