ಕರ್ನಾಟಕ

karnataka

ETV Bharat / state

ಬೆಳ್ಳಂಬೆಳಗ್ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಮನೆಗಳ ಮೇಲೆ ಇಡಿ ದಾಳಿ: ಪರಿಶೀಲನೆ - ed raid in shivamogga

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್​.ಎಂ.ಮಂಜುನಾಥ ಗೌಡ ಮನೆ ಮತ್ತು ಅವರಿಗೆ ಸಂಬಂಧಿಸಿದ 10 ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಮನೆಗಳ ಮೇಲೆ ಇಡಿ ದಾಳಿ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಮನೆಗಳ ಮೇಲೆ ಇಡಿ ದಾಳಿ

By ETV Bharat Karnataka Team

Published : Oct 5, 2023, 9:33 AM IST

Updated : Oct 5, 2023, 1:22 PM IST

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಮನೆಗಳ ಮೇಲೆ ಇಡಿ ದಾಳಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರ ಮನೆ ಸೇರಿದಂತೆ ಇತರ ಕಡೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ನಸುಕಿನ ಜಾವ 3:30 ರ ಸುಮಾರಿಗೆ ಇಡಿ ಅಧಿಕಾರಿಗಳು ತಮ್ಮ ದಾಳಿಯನ್ನು ಪ್ರಾರಂಭಿಸಿದ್ದಾರೆ. ಡಿಸಿಸಿ ಬ್ಯಾಂಕ್​​ನಲ್ಲಿ ಅಡಮಾನ ಚಿನ್ನದ ಮೇಲಿನ ಸಾಲದಲ್ಲಿ ನಕಲಿ ಬಂಗಾರವನ್ನಿಟ್ಟುಕೊಂಡು ಸಾಲ ನೀಡಿದ ಬಹುಕೋಟಿ ಹಗರಣದಲ್ಲಿ ಮಂಜುನಾನಾಥ್ ಗೌಡ ಅವರ ಮೇಲೆ ಪ್ರಕರಣ ದಾಖಲಾಗಿತ್ತು.

ಈ ವಿಚಾರದಲ್ಲಿ ಇಡಿ ಇಲಾಖೆಗೆ ದೂರು ಹೋದ ಪರಿಣಾಮ ಇಡಿ ತನಿಖೆಯನ್ನು ಪ್ರಾರಂಭಿಸಿತ್ತು. ಇಡಿ ಅಧಿಕಾರಿಗಳು ಇಂದು ಮೂರನೇ ಬಾರಿ ದಾಳಿ ನಡೆಸಿದ್ದಾರೆ. ಆರ್.ಎಂ.ಮಂಜುನಾಥ ಗೌಡ ಅವರ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಕಟ್ಟೆ ಬಳಿಯ ಕರಕುಚ್ಚಿಯ ಮನೆ, ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯ ಮನೆ, ಶಿವಮೊಗ್ಗದ ಶರಾವತಿ ನಗರದ ಸಂಬಂಧಿಕರ ಮನೆ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ದೆಹಲಿ ಹಾಗೂ ಗೋವಾದ ಅಧಿಕಾರಿಗಳಿಂದ ದಾಳಿ:ದೆಹಲಿ ಹಾಗೂ ಗೋವಾದ ಇಡಿ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ. ದಾಳಿಯಲ್ಲಿ ಸುಮಾರು 60 ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದಾಳಿಯ ವೇಳೆ ಕೇಂದ್ರ ಶಸ್ತ್ರಾಸ್ತ್ರ ಪಡೆ ಆರ್​ಪಿಎಫ್ ಬಳಸಿಕೊಳ್ಳಲಾಗಿದೆ. ದಾಳಿಯ ಕುರಿತು ಇತರ ಮಾಹಿತಿ ಲಭ್ಯವಾಗಬೇಕಿದೆ.

ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ 62.5 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ‌ ಇಡಿ

ಪಶ್ಚಿಮ ಬಂಗಾಳದಲ್ಲೂ ಐಟಿ ರೇಡ್: ಶಿವಮೊಗ್ಗ ಸೇರಿದಂತೆ ದೇಶದ ಕೆಲವೆಡೆ ಇಂದು ಇಡಿ ದಾಳಿ ಮಾಡಿದೆ. ಪಶ್ಚಿಮ ಬಂಗಾಳದಲ್ಲೂ ಇಡಿ ಪರಿಶೀಲನೆ ನಡೆಸಿದೆ. ಪಾಲಿಕೆಯಲ್ಲಿ ನೇಮಕಾತಿ ಭ್ರಷ್ಟಾಚಾರ ಪ್ರಕರಣ ಸಂಬಂಧ ಪಶ್ಚಿಮ ಬಂಗಾಳದ ಆಹಾರ ಸಚಿವ ರಥಿನ್ ಘೋಷ್ ಮನೆ ಮೇಲೆ ಇಡಿ ಅಧಿಕಾರಿಗಳು ಮಾಡಿ ದಾಖಲಾತಿ ಪರಿಶೀಲಿಸಿದರು. ಘೋಷ್​ ಮನೆಗೆ ಬೆಳ್ಳಂಬೆಳಗ್ಗೆ ಬಂದ ಜಾರಿ ನಿರ್ದೇಶನಾಲಯ, ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ನೇಮಕಾತಿ ಪ್ರಕರಣದಲ್ಲಿ ಸಚಿವರ ಹೆಸರು ಕೇಳಿಬಂದಿದ್ದರಿಂದ ಇಡಿ ದಾಳಿ ಮಾಡಿದೆ.

ತಮಿಳುನಾಡಿನಲ್ಲಿ ಇಂದು ಐಟಿ ದಾಳಿ: ಇಂದು ಬೆಳಗ್ಗೆ ಚೆನ್ನೈ ಸೇರಿ ತಮಿಳುನಾಡಿನ ಕೆಲವೆಡೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸಂಸದ ಜಗತ್ ರಕ್ಷಕನ್ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳು, ಕಚೇರಿ ಸೇರಿ ಮೇಲೆ ಐಟಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ. ಸಂಸದರು ಹಲವು ಕಡೆ ಹೂಡಿಕೆ ಮಾಡಿದ್ದು, ಸರಿಯಾಗಿ ತೆರಿಗೆ ಪಾವತಿಸಿಲ್ಲ ಎಂಬ ಆರೋಪದ ಮೇಲೆ ಐಟಿ ದಾಳಿ ಮಾಡಿದೆ.

Last Updated : Oct 5, 2023, 1:22 PM IST

ABOUT THE AUTHOR

...view details