ಶಿವಮೊಗ್ಗ: ಶಿರಾಳಕೊಪ್ಪದಲ್ಲಿ ಇಂದು ನಸುಕಿನ ಜಾವ ಭೂಮಿ ಕಂಪಿಸಿದ ಅನುಭವವಾಗಿದೆ. 3.40 ಹಾಗೂ 3.45 ರ ಸುಮಾರಿಗೆ ಭೂಮಿ ಕಂಪಿಸಿದ್ದು, ನಿದ್ರೆಯಲ್ಲಿದ್ದ ಜನ ಮನೆಯಿಂದ ಹೊರಕ್ಕೆ ಓಡಿಬಂದಿದ್ದಾರೆ.
ಮಲಗಿದ್ದಾಗ ಏಕಾಏಕಿ ಭೂಮಿ ಕಂಪಿಸಿದೆ. ಇದರಿಂದ ಮನೆಯಲ್ಲಿದ್ದ ಪಾತ್ರೆಗಳು ಅಲುಗಾಡಿವೆ. ಭಯ-ಭೀತರಾದ ಜನ ಮನೆಯಿಂದ ಓಡಿ ಬಂದು ರಸ್ತೆಯಲ್ಲಿ ನಿಂತಿದ್ದರು. ಭೂಮಿ ಕೇವಲ 3-4 ಸೆಕೆಂಡ್ ಕಂಪಿಸಿದೆ. ಆದರೆ, ಯಾವುದೇ ವಸ್ತುಗಳು ಬಿದ್ದಿಲ್ಲ, ಮನೆಗಳ ಗೋಡೆ ಬಿರುಕು ಬಿಟ್ಟಿಲ್ಲ. ಕಂಪನದ ಅನುಭವ ಶಿರಾಳಕೊಪ್ಪ ಪಟ್ಟಣದ ವ್ಯಾಪ್ತಿಯಲ್ಲಿ ಮಾತ್ರ ನಡೆದಿದೆ. ಪಕ್ಕದ ಗ್ರಾಮಗಳಲ್ಲಿ ಯಾವುದೇ ಕಂಪನದ ಅನುಭವವಾಗಿಲ್ಲ.