ಶಿವಮೊಗ್ಗ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಮತ್ತೆ ಮೈತ್ರಿ ಬಣಕ್ಕೆ ಜಯ ಲಭಿಸಿದೆ. ಎಪಿಎಂಸಿಯ ಕಚೇರಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ನ ದುಗ್ಗಪ್ಪ ಗೌಡ ಮತ್ತೊಮ್ಮೆ ಅಧ್ಯಕ್ಷರಾದರೆ, ಉಪಾಧ್ಯಕ್ಷರಾಗಿ ಆರ್.ಬಾಬು ಆಯ್ಕೆಯಾದರು.
ಶಿವಮೊಗ್ಗ ಎಪಿಎಂಸಿ ಅಧ್ಯಕ್ಷರಾಗಿ ಜೆಡಿಎಸ್ನ ದುಗ್ಗಪ್ಪ ಗೌಡ ಆಯ್ಕೆ - ಶಿವಮೊಗ್ಗ ಎಪಿಎಂಸಿ ಚುನಾವಣೆ
ಶಿವಮೊಗ್ಗ ಎಪಿಎಂಸಿಯ ಕಚೇರಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ನ ದುಗ್ಗಪ್ಪ ಗೌಡ ಮತ್ತೊಮ್ಮೆ ಅಧ್ಯಕ್ಷರಾದರೆ, ಉಪಾಧ್ಯಕ್ಷರಾಗಿ ಆರ್.ಬಾಬು ಆಯ್ಕೆಯಾದರು.
Apmc
ಬಿಜೆಪಿಯಿಂದ ಜಗದೀಶ್ ಎಂಬುವರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಾಲಕೃಷ್ಣ ಸ್ಪರ್ಧೆ ಮಾಡಿದ್ದರು. ಬಿಜೆಪಿಯಿಂದ ಅಡ್ಡ ಮತದಾನವಾಗಿದೆ ಎನ್ನಲಾಗಿದ್ದು, ಜೆಡಿಎಸ್ನ ದುಗ್ಗಪ್ಪ ಗೌಡ ಅಧ್ಯಕ್ಷರಾಗಿ ಮತ್ತು ಆರ್.ಬಾಬು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆ ಆಗಲು ಪೊಲೀಸರು ಬಿಡಲಿಲ್ಲ.