ಸಿಡಿಲು ಬಡಿದು ಹುಲ್ಲಿನ ಬಣವೆಗೆ ಬೆಂಕಿ: ಲಕ್ಷಾಂತರ ರೂ ನಷ್ಟ - ಶಿವಮೊಗ್ಗ ಸುದ್ದಿ
ಸಿಡಿಲಿಗೆ ಹುಲ್ಲಿನ ಬಣವೆಗೆ ಬೆಂಕಿಹೊತ್ತಿಕೊಂಡು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

ಸಿಡಿಲಿಗೆ ಹುಲ್ಲಿನ ಬವಣೆಗೆ ಬೆಂಕಿ: ಲಕ್ಷಾಂತರ ರೂ ನಷ್ಟ
ಶಿವಮೊಗ್ಗ: ಸಂಜೆ ಬಂದ ಭಾರಿ ಗುಡುಗು- ಸಿಡಿಲಿಗೆ ಭತ್ತದ ಬಣವೆಗೆ ಬೆಂಕಿ ಬಿದ್ದ ಘಟನೆ ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿ ಗ್ರಾಮದಲ್ಲಿ ನಡೆದಿದೆ. ಕುರುವಳ್ಳಿ ಮಾನಿ ಮಂಜುನಾಥ್ ರವರ ಮನೆ ಪಕ್ಕದ ಖಾಲಿ ಜಾಗದಲ್ಲಿ ಮನೆಯ ಜಾನುವಾರುಗಳಿಗೆ ಮೇವಿನ ಸಲುವಾಗಿ ಭತ್ತದ ಬಣವೆ ಹಾಕಲಾಗಿತ್ತು. ಸಿಡಿಲು ಬಡಿದ ಪರಿಣಾಮ ಏಕಾಏಕಿ ಬೆಂಕಿ ಬಿದ್ದಿದೆ. ಸಣ್ಣ ಮಳೆಯು ಬಂದರು ಸಹ ಬೆಂಕಿ ನಂದದ ಕಾರಣ ಅಗ್ನಿ ಶಾಮಕ ದಳದವರಿಗೆ ತಿಳಿಸಿದ್ದಾರೆ. ನಂತರ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ. ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : May 6, 2021, 8:56 PM IST