ಶಿವಮೊಗ್ಗ: ಉಚಿತ ಆಯುರ್ವೇದ ಔಷಧ ಕಿಟ್ ವಿತರಣೆ ಸಂದರ್ಭದಲ್ಲಿ ಸಂಗ್ರಹಿಸುತ್ತಿರುವ ಆಧಾರ್ ಕಾರ್ಡ್ನಿಂದ ಯಾವುದೇ ತೊಂದರೆ ಆಗುವುದಿಲ್ಲ. ಕಿಟ್ ಪುನರಾವರ್ತನೆ ಆಗಬಾರದು ಎಂಬ ಉದ್ದೇಶದಿಂದ ಆಧಾರ್ ಕಾರ್ಡ್ ಕೇಳಲಾಗುತ್ತಿದೆ ಎಂದು ಕೋವಿಡ್ ಕಾರ್ಯ ಪಡೆಯ ಮುಖ್ಯಸ್ಥ ಹಾಗೂ ಆರ್ಯವೈಶ್ಯ ನಿಗಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ.ಎಸ್. ಅರುಣ್ ತಿಳಿಸಿದರು.
ಒಬ್ಬರಿಗೇ ಎರಡು ಬಾರಿ ಕಿಟ್ ಪೂರೈಕೆ ತಡೆಗಟ್ಟಲು ಆಧಾರ್ ಸಂಖ್ಯೆ ಸಂಗ್ರಹ
ಉಚಿತ ಆಯುರ್ವೇದ ಔಷಧ ಕಿಟ್ ಅನ್ನು ಶಿವಮೊಗ್ಗ ನಗರದ ಎಲ್ಲರಿಗೂ ತಲುಪಿಸುವ ಹಾಗೂ ಕೊಟ್ಟವರಿಗೆ ಮತ್ತೆ ಕೊಡುವುದನ್ನು ತಪ್ಪಿಸುವ ಉದ್ದೇಶದಿಂದ ಆಧಾರ್ ಕಾರ್ಡ್ ಸಂಗ್ರಹಿಸಲಾಗುತ್ತಿದೆ. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಆರ್ಯ ವೈಶ್ಯ ನಿಗಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ.ಎಸ್. ಅರುಣ್ ಸ್ಪಷ್ಪಪಡಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಧಾರ್ ಕಾರ್ಡ್ ಪಡೆಯುತ್ತಿರುವ ಬಗ್ಗೆ ಸಾಕಷ್ಟು ಆಪಸ್ವರಗಳು ಕೇಳಿಬರುತ್ತದೆ. ಕಿಟ್ ಅನ್ನು ನಗರದ ಎಲ್ಲರಿಗೂ ತಲುಪಿಸುವ ಹಾಗೂ ಕೊಟ್ಟವರಿಗೆ ಮತ್ತೆ ಕೊಡುವುದನ್ನು ತಪ್ಪಿಸುವ ಉದ್ದೇಶದಿಂದ ಆಧಾರ್ ಕಾರ್ಡ್ ಸಂಗ್ರಹಿಸಲಾಗುತ್ತಿದೆ. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಪಪಡಿಸಿದರು.
ನಗರದಲ್ಲಿ ಸಚಿವ ಈಶ್ವರಪ್ಪ ನೇತೃತ್ವದಲ್ಲಿ ಉಚಿತವಾಗಿ ನೀಡಲಾಗುತ್ತಿರುವ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುರ್ವೇದ ಔಷಧ ಡಾ. ಗಿರಿಧರ್ ಕಜೆ ತಯಾರಿಸಿದ ಔಷಧವಲ್ಲ ಎಂದು ಸ್ಪಷ್ಟಪಡಿಸಿದರು. ಎರಡು ದಿನಗಳ ಹಿಂದೆ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿ ಆಯುರ್ವೇದ ಕಿಟ್ ನೀಡಲು ಆಧಾರ್ ಯಾಕೆ ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದ್ದರು.