ಕರ್ನಾಟಕ

karnataka

ETV Bharat / state

ಆಗುಂಬೆ ಘಾಟ್​​ನಲ್ಲಿ ನಿಯಂತ್ರಣ ತಪ್ಪಿ ತಡೆಗೋಡೆಗೆ ಲಾರಿ ಡಿಕ್ಕಿ: ಅದೃಷ್ಟವಶಾತ್ ಚಾಲಕ, ಕ್ಲೀನರ್ ಪಾರು - ಘಾಟ್​ ತಡೆಗೋಡೆಗೆ ಲಾರಿ ಡಿಕ್ಕಿ

ಆಗುಂಬೆ ಘಾಟ್​ನಲ್ಲಿ ಲಾರಿಯೊಂದು ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಚಾಲಕ ಹಾಗೂ ಕ್ಲೀನರ್ ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Agumbe Ghat
Agumbe Ghaಆಗುಂಬೆ ಘಾಟ್​​ನಲ್ಲಿ ನಿಯಂತ್ರಣ ತಪ್ಪಿ ತಡೆಗೋಡೆಗೆ ಲಾರಿ ಡಿಕ್ಕಿt

By

Published : Aug 5, 2021, 3:21 PM IST

ಶಿವಮೊಗ್ಗ:ಇಲ್ಲಿನ ಆಗುಂಬೆ ಘಾಟ್​​ನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ತಡೆಗೋಡೆಗೆ ಡಿಕ್ಕಿಯಾಗಿ ಅದೃಷ್ಟವಶಾತ್ ಲಾರಿ ಪ್ರಪಾತದ ತುದಿಯಲ್ಲಿ ನಿಂತಿರುವ ಘಟನೆ ಮುಂಜಾನೆ ನಡೆದಿದೆ. ಕೂದಲೆಳೆ ಅಂತರದಲ್ಲಿ ಅನಾಹುತಾವೊಂದು ತಪ್ಪಿದಂತಾಗಿದ್ದು, ಚಾಲಕ ಹಾಗೂ ಕ್ಲೀನರ್​​ಗೆ ಸಣ್ಣಪುಟ್ಟ ಗಾಯವಾಗಿದೆ.

ಆಗುಂಬೆ ಘಾಟ್​​ನಲ್ಲಿ ನಿಯಂತ್ರಣ ತಪ್ಪಿ ತಡೆಗೋಡೆಗೆ ಲಾರಿ ಡಿಕ್ಕಿ

ಆಗುಂಬೆ ಘಾಟ್​​​​ನ 6 ಹಾಗೂ 7ನೇ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಲಾರಿ ತಡೆಗೋಡೆಗೆ ಡಿಕ್ಕಿಯಾಗಿ ಅರ್ಧದಲ್ಲಿಯೇ ನಿಂತಿದೆ. ಶಿವಮೊಗ್ಗದಿಂದ ಮಂಗಳೂರಿಗೆ ಭತ್ತ ತುಂಬಿಕೊಂಡು ತೆರಳುತ್ತಿದ್ದ ಲಾರಿ ಅಪಘಾತಕ್ಕೆ ಒಳಗಾಗಿದೆ. ಘಟನೆಯಿಂದಾಗಿ ಕೆಲಕಾಲ ಘಾಟಿಯಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಸಂಸದ ರಾಘವೇಂದ್ರ ಮನೆ ಮುತ್ತಿಗೆಗೆ ಯತ್ನ.. ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ

ABOUT THE AUTHOR

...view details