ಶಿವಮೊಗ್ಗ:ಇಂದು ನಮ್ಮ ಸಂವಿಧಾನದಡಿ ಸಿಗುವ ನ್ಯಾಯ ತೀರ್ಮಾನಕ್ಕೂ ಬೆಲೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ದೇಶಕ್ಕಾದ ಅವಮಾನ ಎಂಬುದನ್ನು ಮನಗಾಣಬೇಕಿದೆ ಎಂದು ಡಾ. ಕೆಳದಿ ಗುಂಡಾ ಜೋಯ್ಸ್ ಕಳವಳ ವ್ಯಕ್ತಪಡಿಸಿದರು. ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಕಸಾಪದ ವತಿಯಿಂದ ಆಯೋಜಿಸಿದ್ದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂವಿಧಾನದಡಿ ಸಿಗುವ ನ್ಯಾಯಕ್ಕೂ ಬೆಲೆ ಸಿಗದ ಪರಿಸ್ಥಿತಿ ನಿರ್ಮಾಣ: ಗುಂಡಾ ಜೋಯ್ಸ್
ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.
ಕನ್ನಡ ಸಾಹಿತ್ಯ ಸಮ್ಮೇಳನ
ಧರ್ಮದ ಚೌಕಟ್ಟು ಮನೆಯಲ್ಲಿ ಇಟ್ಟುಕೊಂಡು ಮನೆಯಿಂದ ಹೊರಗೆ ಎಲ್ಲರೂ ಒಂದು ಎಂಬ ಭಾವನೆಯನ್ನು ರೂಪಿಸುವಂತಹ ಶಿಕ್ಷಣ ಬೇಕು. ಸಮುದಾಯವೊಂದನ್ನು ಓಲೈಸುವ ಪರಿಪಾಠದಿಂದ ಹೊರಬಂದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಮತ್ತು ನಮ್ಮ ನಾಡು, ನುಡಿ, ಭಾಷೆಯನ್ನು ಪರಿಚಯಿಸುವ, ಪ್ರೀತಿಸುವಂತಹ ಶಿಕ್ಷಣ ದೊರೆಯುವಂತಾಗಬೇಕಿದೆ ಎಂದರು.
ಇದನ್ನೂ ಓದಿ:ನೆನಪಿಗಾಗಿ ಅಗಲಿದ ತಾಯಿಯ ಮಂದಿರ ನಿರ್ಮಿಸಿದ ಮಕ್ಕಳು.. ಇದು ಮಾತೃಪ್ರೀತಿ..!