ಕರ್ನಾಟಕ

karnataka

ETV Bharat / state

ವರದಕ್ಷಿಣೆ ಕಿರುಕುಳ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ - ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿ

ವರದಕ್ಷಿಣೆ ಕಿರುಕುಳದಿಂದ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

Housewife commits suicide by hanging herself
ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

By

Published : Dec 3, 2022, 5:02 PM IST

ಶಿವಮೊಗ್ಗ: ವರದಕ್ಷಿಣೆ ಕಿರುಕುಳದಿಂದ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಸಂಗೀತ(24) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಸಂಗೀತರನ್ನು ಉಡುಗುಣಿ ಗ್ರಾಮದಿಂದ ಶಿರಾಳಕೊಪ್ಪ ಪಟ್ಟಣಕ್ಕೆ ಕಳೆದ ಒಂದೂವರೆ ವರ್ಷದ ಹಿಂದೆ ಹರೀಶ್ ಎಂಬುವರಿಗೆ ಕೊಟ್ಟು ಮದುವೆ ಮಾಡಿ ಕೊಡಲಾಗಿತ್ತು.

ಸಂಗೀತ ಸ್ವಲ್ಪ ದಪ್ಪಗಿದ್ದ ಕಾರಣ ಜಾಸ್ತಿ ತಿನ್ನಬೇಡ, ಇನ್ನೂ ದಪ್ಪ ಆಗ್ತಿಯಾ ಎಂದು ಗಂಡನ ಮನೆಯವರು ಹಿಯಾಳಿಸುತ್ತಿದ್ದರು ಹಾಗೂ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದರು. ಇದರಿಂದ ತಮ್ಮ ಮಗಳು ನೇಣಿಗೆ ಶರಣಾಗಿದ್ದಾಳೆ ಎಂದು ಮೃತ ಸಂಗೀತ ತಂದೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮದುವೆ ಮಾಡುವಾಗ 40 ಗ್ರಾಂ ಚಿನ್ನ, 1 .80 ಲಕ್ಷ ರೂ ಮೌಲ್ಯದ ಪಾತ್ರೆಗಳನ್ನು‌ ನೀಡಲಾಗಿತ್ತು. ಮಗಳಿಗಾಗಿ ತಂದೆ ಒಂದೂವರೆ ಎಕರೆ ಭೂಮಿ ನೀಡಲು ವಿಲ್ ಬರೆಯಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸಂಗೀತ ಮೃತ ದೇಹದ ಮೇಲೆ ಹಲ್ಲೆಯಾಗಿರುವ ಗುರುತುಗಳಿದ್ದು, ತುಟಿಯ ಮೇಲ್ಬಾಗದಲ್ಲಿ ಗಾಯವಾಗಿದೆ. ಗಂಡ ಹರೀಶ್, ಅತ್ತೆ ದುರ್ಗಮ್ಮ, ಮಾವ ಶಿವಲಿಂಗಪ್ಪ , ಸಹೋದರ ಮಾಲ್ತೇಶ್ ಎಂಬುವರ ವಿರುದ್ದ ದೂರು ದಾಖಲಾಗಿದೆ. ಈಗಾಗಲೇ ಹರೀಶ್ ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ..

ಇದನ್ನೂ ಓದಿ:ವಿಜಯಪುರ: ಅತ್ಯಾಚಾರ ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ABOUT THE AUTHOR

...view details