ಕರ್ನಾಟಕ

karnataka

ETV Bharat / state

ನಿರ್ಮಾಣ ಹಂತದ ಕಟ್ಟಡದಲ್ಲಿ ಡಬಲ್ ಮರ್ಡರ್.. ಬೆಚ್ಚಿಬಿದ್ದ ತೀರ್ಥಹಳ್ಳಿ ಜನ - ಈಟಿವಿ ಭಾರತ ಕನ್ನಡ

ಶಿವಮೊಗ್ಗ ಜಿಲ್ಲೆಯಲ್ಲಿ ನೆತ್ತರು ಹರಿದಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಜೋಡಿ ಕೊಲೆ ನಡೆದಿದೆ.

double-murder-in-under-construction-building-at-thirthahalli
ತೀರ್ಥಹಳ್ಳಿ : ನಿರ್ಮಾಣ ಹಂತದ ಕಟ್ಟಡದಲ್ಲಿ ಡಬಲ್ ಮರ್ಡರ್

By

Published : May 18, 2023, 12:55 PM IST

ಶಿವಮೊಗ್ಗ :ನಿರ್ಮಾಣ ಹಂತದ ಕಟ್ಟಡದಲ್ಲಿ ಜೋಡಿ‌ ಕೊಲೆ ನಡೆದಿರುವ ಘಟನೆ ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಯಲ್ಲಿ ಎಂಬಲ್ಲಿ ನಡೆದಿದೆ. ಇಲ್ಲಿ ನಿರ್ಮಾಣವಾಗುತ್ತಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ‌ ಬುಧವಾರ ರಾತ್ರಿ ಜೋಡಿ ಕೊಲೆ ನಡೆದಿರುವುದಾಗಿ ತಿಳಿದುಬಂದಿದೆ. ಮೃತರನ್ನು ದಾವಣಗೆರೆ ಮೂಲದ ಕಟ್ಟಡ ಕಾರ್ಮಿಕರಾದ ಮಂಜಪ್ಪ(45) ಹಾಗೂ ಬೀರಪ್ಪ(46) ಎಂದು ಗುರುತಿಸಲಾಗಿದೆ. ರಾಮಪ್ಪ ಕೊಲೆಗೈದ ಆರೋಪಿ.

ರಾಮಪ್ಪ ಎಂಬಾತ ಇಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ತೀರ್ಥಹಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜೊತೆಗೆ ಬೆರಳಚ್ಚು ತಂಡವೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.

ಗಾಂಜಾ ಮತ್ತಿನಲ್ಲಿ ಕೊಲೆ ಶಂಕೆ :ಗಾಂಜಾ ಮತ್ತಿನಲ್ಲಿ ಕೊಲೆ‌ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಭಾಗದಲ್ಲಿ ಗಾಂಜಾ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ಗಾಂಜಾ ಮಾರಾಟ ತಡೆಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ತೀರ್ಥಹಳ್ಳಿಯ ಮಾರುಕಟ್ಟೆಯಲ್ಲಿ ಅಮಾನತ್ತಿನಲ್ಲಿದ್ದ ಕಾನ್ಸಟೇಬಲ್​ನನ್ನು ಜೊತೆಯಲ್ಲಿ ಇದ್ದವನೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನು. ಈ ಘಟನೆ ಮಾಸುವ ಮುನ್ನವೇ ಜೋಡಿ ಕೊಲೆ ನಡೆದಿರುವುದು ತೀರ್ಥಹಳ್ಳಿ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ :ಬೆಳಕಿಗಾಗಿ ಹಚ್ಚಿದ ದೀಪದಿಂದ ಮನೆಗೆ ಬೆಂಕಿ: ವೃದ್ಧ ಸಜೀವ ದಹನ

ABOUT THE AUTHOR

...view details