ಕರ್ನಾಟಕ

karnataka

ETV Bharat / state

ವೈದ್ಯರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ: ಆಸ್ಪತ್ರೆ ಒಪಿಡಿ ಬಂದ್ - undefined

ತಾಲೂಕು ಪಂಚಾಯತ್ ಅಧ್ಯಕ್ಷನೊಬ್ಬ ಸರ್ಕಾರಿ‌ ವೈದ್ಯಾಧಿಕಾರಿ ಮೇಲೆ ಹಲ್ಲೆಗೆ ಯತ್ನಿಸಿರುವುದಾಗಿ ಆರೋಪಿಸಿ  ಒಪಿಡಿ ಬಂದ್ ಮಾಡಿ ವೈದ್ಯರ ಮುಷ್ಕರ ನಡೆಸಿದ್ದಾರೆ.

ಆಸ್ಪತ್ರೆ ಒಪಿಡಿ ಬಂದ್

By

Published : Jul 16, 2019, 11:26 PM IST

ಶಿವಮೊಗ್ಗ: ಸಾಗರದ ಉಪವಿಭಾಗೀಯ ಆಸ್ಪತ್ರೆ ವೈದ್ಯಾಧಿಕಾರಿ ಮೇಲೆ ಸಾಗರ ತಾಲೂಕು ಪಂಚಾಯತ್ ಅಧ್ಯಕ್ಷ ಅವಾಚ್ಯ‌ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ವೈದ್ಯರು ಆಸ್ಪತ್ರೆಯ ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಕಾಶ್ ಬೋಸ್ಲೆ ಅವರ ಮೇಲೆ ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಲು ಯತ್ನಿಸಿದರು ಎಂದು ಆರೋಪಿಸಿರುವ ವೈದ್ಯರು ಒಪಿಡಿ ಬಂದ್ ಮಾಡಿ ಮುಷ್ಕರ ನಡೆಸಿದ್ದು, ವೈದ್ಯಾಧಿಕಾರಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವರನ್ನು ಇಲಾಖೆಯ ಆದೇಶದ ಪ್ರಕಾರ ಕೆಲಸದಿಂದ ಬಿಡುಗಡೆ ಮಾಡಿದ್ದಾರೆ.

ಈ ವಿಷಯ ಚರ್ಚಿಸಲು ಬಂದ ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರು ಏಕಾಏಕಿ ಕೆಲಸದಿಂದ ತೆಗೆದವರನ್ನು ಪುನಃ ಕೆಲಸಕ್ಕೆ‌ ತೆಗೆದುಕೊಳ್ಳಿ ಎಂದು ಬೋಸ್ಲೆ ಅವರಿಗೆ ಆವಾಜ್ ಹಾಕಿದ್ದಾರೆ. ಅಲ್ಲದೆ, ಆಸ್ಪತ್ರೆ ಖುರ್ಚಿಗಳನ್ನು ಎತ್ತಿ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ಪ್ರಕಾಶ್ ಬೋಸ್ಲೆ ಆರೋಪಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details