ಶಿವಮೊಗ್ಗ:ತಿಲಕ್ ನಗರದ ಕಾರ್ಮಿಕ ಇಲಾಖೆಯ ಮುಂಭಾಗದಲ್ಲಿ ಡಾ. ಮಂಜುನಾಥ್ ರವರು ಮನೆ ನಿರ್ಮಾಣಕ್ಕೆ ಮರವೊಂದು ಅಡ್ಡವಿದೆಯೆಂದು ಕಡಿದು ಹಾಕಿದ ಪರಿಣಾಮ
ಮನೆ ನಿರ್ಮಾಣಕ್ಕೆಂದು ಮರಕ್ಕೆ ಕೊಡಲಿ ಇಟ್ಟ ವೈದ್ಯ: ನೋಟಿಸ್ ನೀಡಿದ ಅರಣ್ಯ ಇಲಾಖೆ - ಅನುಮತಿ ಪಡೆಯದೆ ಕಡಿದು ಹಾಕಿದ್ದಾರೆ
ಮನೆ ನಿರ್ಮಾಣಕ್ಕೆ ರಸ್ತೆಯಲ್ಲಿದ್ದ ಮರದ ಬುಡಕ್ಕೆ ಕೊಡಲಿ ಇಟ್ಟ ವೈದ್ಯರೊಬ್ಬರಿಗೆ ಶಿವಮೊಗ್ಗ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ.
![ಮನೆ ನಿರ್ಮಾಣಕ್ಕೆಂದು ಮರಕ್ಕೆ ಕೊಡಲಿ ಇಟ್ಟ ವೈದ್ಯ: ನೋಟಿಸ್ ನೀಡಿದ ಅರಣ್ಯ ಇಲಾಖೆ](https://etvbharatimages.akamaized.net/etvbharat/prod-images/768-512-4839219-thumbnail-3x2-smg.jpg)
ನೋಟಿಸ್
ಡಾ. ಮಂಜುನಾಥ್ ರವರು ಮನೆ ನಿರ್ಮಾಣಕ್ಕಾಗಿ ಹಳೆ ಮನೆಯನ್ನು ಕೆಡವಲು ಮುಂದಾಗಿದ್ದಾರೆ. ಇದಕ್ಕೆ ಕಾಂಪೋಡ್ ಒಳಗೆ ಜೆಸಿಬಿ ಹೋಗಲು ಅಡ್ಡವಾಗುತ್ತದೆಯೆಂದು ಸುಮಾರು 10 ವರ್ಷದ ಹೊಂಗೆ ಮರವನ್ನು ಕಡಿದು ಹಾಕಲಾಗಿದೆ.
ವಲಯಾಧಿಕಾರಿಗಳ ಕಚೇರಿಯಿಂದ ನೋಟಿಸ್
ರಸ್ತೆ ಬದಿ ಪಾಲಿಕೆಯವರು ಅರಣ್ಯ ಇಲಾಖೆಯವರ ಜೊತೆ ನೆಟ್ಟಿದ್ದ ಹೊಂಗೆ ಮರವನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಕಡಿದು ಹಾಕಿದ್ದಾರೆ. ಮರ ಕಡಿದ ವಿಚಾರ ಅರಣ್ಯ ಇಲಾಖೆಗೆ ತಿಳಿಯುತ್ತಿದ್ದಂತೆ ವಲಯಾಧಿಕಾರಿಗಳ ಕಚೇರಿಯಿಂದ ನೋಟಿಸ್ ಜಾರಿ ಮಾಡಿದ್ದಾರೆ.