ಶಿವಮೊಗ್ಗ: ಸಿಎಂ ಬಿಎಸ್ವೈ ಅವರನ್ನು ವೈಯಕ್ತಿವಾಗಿ ಟೀಕಿಸಬೇಡಿ. ವಿರೋಧ ಪಕ್ಷದಲ್ಲಿದ್ದು ಅಂತಹ ಪದ ಬಳಕೆ ಮಾಡಬೇಡಿ ಎಂದು ವಿನಂತಿಸಿಕೊಳ್ಳುತ್ತೇನೆ ಎಂದು ಗ್ರಾಮೀಣಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ದಯವಿಟ್ಟು ವೈಯಕ್ತಿಕ ಟೀಕೆ ಮಾಡಬೇಡಿ: ಸಿದ್ದರಾಮಯ್ಯಗೆ ಈಶ್ವರಪ್ಪ ಮನವಿ - ಸಚಿವ ಕೆ.ಎಸ್.ಈಶ್ವರಪ್ಪ
ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಟೀಕೆ ಮಾಡುವುದು ತಪ್ಪಲ್ಲ. ಆದರೆ, ಬಿಎಸ್ವೈ ಹಾಗೂ ಮೋದಿ ಅವರನ್ನು ವೈಯಕ್ತಿವಾಗಿ ಟೀಕೆ ಮಾಡುವುದು ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
![ದಯವಿಟ್ಟು ವೈಯಕ್ತಿಕ ಟೀಕೆ ಮಾಡಬೇಡಿ: ಸಿದ್ದರಾಮಯ್ಯಗೆ ಈಶ್ವರಪ್ಪ ಮನವಿ](https://etvbharatimages.akamaized.net/etvbharat/prod-images/768-512-4306183-thumbnail-3x2-dghs.jpg)
ಸಚಿವ ಕೆ.ಎಸ್.ಈಶ್ವರಪ್ಪ
ಸಚಿವ ಕೆ.ಎಸ್.ಈಶ್ವರಪ್ಪ
ಇಲ್ಲಿನ ಮಲ್ಲೇಶ್ವರ ನಗರದ ಯೋಗಾ ಕೇಂದ್ರದ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಅಭಿವೃದ್ಧಿ ಲೋಪದೋಷದ ಬಗ್ಗೆ ಎಷ್ಟಾದರೂ ಟೀಕಿಸಿ, ಬಿಎಸ್ವೈ ಹಸಿರು ಶಾಲು ಹಾಕಿಕೊಂಡಿದ್ದಕ್ಕೆ, ಮೋದಿ ಅವರು ಫೋಟೋ ತೆಗೆಸಿಕೊಳ್ಳಲು ವಿದೇಶಕ್ಕೆ ಹೋಗುತ್ತಾರೆ ಎಂಬ ವೈಯಕ್ತಿಕ ಟೀಕೆ ಸರಿಯಲ್ಲ ಎಂದು ಹೇಳಿದರು.
ನಮ್ಮ ಸರ್ಕಾರ ನೀರು ನುಗ್ಗಿದ ಮನೆಗಳಿಗೆ ತಕ್ಷಣ ವಸ್ತುಗಳನ್ನು ಖರಿದೀಸಲು ₹ 10 ಸಾವಿರ, ಮನೆ ದುರಸ್ತಿಗೆ ₹ 50 ಸಾವಿರ, ಭಾಗಶಃ ಬಿದ್ದ ಮನೆಗಳಿಗೆ 1 ಲಕ್ಷ, ಸಂಪೂರ್ಣ ಬಿದ್ದ ಮನೆಗಳಿಗೆ ₹ 5 ಲಕ್ಷ ಬಿಡುಗಡೆ ಮಾಡಿದೆ ಎಂದರು.