ಶಿವಮೊಗ್ಗ: ಬಂಜಾರ ಸಮುದಾಯದ ಧ್ವನಿಯಾಗಿ ನಿಮ್ಮೊಂದಿಗೆ ಇರುತ್ತೇನೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಗುರುವಾರ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ, ಮರಡಿ ತಾಂಡ ಹಾಗೂ ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಕುಂಚೇನಹಳ್ಳಿ ತಾಂಡಗಳಿಗೆ ಭೇಟಿ ನೀಡಲಿರುವ ಅವರು ಬಂಜಾರ ಸಮುದಾಯದವರೊಂದಿಗೆ ಸಂವಾದ ನಡೆಸುತ್ತಾರೆ.
ಈ ಸಂಬಂಧ ಇಂದು ಮಾತನಾಡಿರುವ ಅವರು, ನನ್ನ ಕ್ಷೇತ್ರದಲ್ಲಿ ಬಂಜಾರ ಜನಾಂಗದ ಜೊತೆ ಚಿಕ್ಕ ವಯಸ್ಸಿನಿಂದಲೂ ಬಾಲ್ಯ ಜೀವನವನ್ನು ಕಳೆದಿರುವೆ. ಈಗ ರಾಜ್ಯದ ಉದ್ದಗಲಕ್ಕೂ ಬಂಜಾರ ಸಮುದಾಯದ ಸಮಸ್ಯೆ ತಿಳಿದುಕೊಳ್ಳಲು ನಿಮ್ಮನ್ನು ಭೇಟಿ ಮಾಡಲು ಬರುತ್ತಿದ್ದೇನೆ.
ಬಂಜಾರ ಜನಾಂಗದ ವಲಸೆ ಸಮಸ್ಯೆ, ನಿರುದ್ಯೋಗ, ಕೊರೊನಾ ಸಂದರ್ಭದಲ್ಲಿ ನಿಮಗಾಗಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಬರುತ್ತಿದ್ದೇನೆ. ಹಾಗಾಗಿ ಸಮಸ್ಯೆಗಳನ್ನು ನನ್ನೊಂದಿಗೆ ಮನಬಿಚ್ಚಿ ಹಂಚಿಕೊಳ್ಳಿ. ನಾನು ನಿಮ್ಮ ಧ್ವನಿಯಾಗಿರುತ್ತೇನೆ. ಇದು ರಾಜಕೀಯ ಸಭೆಯಲ್ಲ, ಬಾಂಧವ್ಯದ ಸಭೆ, ಹಾಗಾಗಿ ಎಲ್ಲರೂ ಬಂದು ಸಹಕಾರ ನೀಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕಟೀಲು ಶ್ರೀದೇವಿಗೆ ಅಶ್ಲೀಲ ಪದಗಳಿಂದ ನಿಂದನೆ: ಕಣ್ಣೀರಿಟ್ಟು ಕ್ಷಮೆ ಕೋರಿದ ಆರೋಪಿ