ಶಿವಮೊಗ್ಗ:ಡಿ.ಕೆ.ಶಿವಕುಮಾರ್ ಒಬ್ಬ, ನೂರು ಜನಕ್ಕೆ ಸಮಾನ ಎಂದು ಯಡಿಯೂರಪ್ಪ, ಈಶ್ವರಪ್ಪ ಹಾಗೂ ರಾಘವೇಂದ್ರರವರಿಗೆ ಗೂತ್ತು. ಅವರ ಬಳಿ ಕೇಳಿ ಎಂದು ಸಚಿವ ಡಿ.ಕೆ.ಶಿವಕುಮಾರ್ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಆಯನೂರು ಮಂಜುನಾಥ್ ಹೇಳಿಕೆಯ ಬಗ್ಗೆ ನಾನಲ್ಲ, ನನ್ನ ಪಕ್ಷದ ಸಣ್ಣ ಹುಡುಗರು ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಐಟಿಯಂತಹ ಸ್ವಾಯತ್ತ ಸಂಸ್ಥೆಯನ್ನು ಬಿಜೆಪಿಯವರು ದುರ್ಬಳಕೆ ಮಾಡಿ ಕೊಂಡಿದ್ದಾರೆ. ಈ ಕುರಿತು ಸಿಎಂ ಕುಮಾರಸ್ವಾಮಿರವರು ಬೀದಿಗಳಿದು ಹೋರಾಟ ಮಾಡಿರುವುದೇ ಸಾಕ್ಷಿ ಎಂದರು.
ರಾಜ್ಯದಲ್ಲಿ 20 ರಿಂದ 23 ಸ್ಥಾನ ಮೈತ್ರಿ ಸರ್ಕಾರಕ್ಕೆ ಬರುತ್ತದೆ. ಬಿಜೆಪಿಯವರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲ್ಲ ಅಂತ ತೇಜಸ್ವಿ ಅನಂತ ಕುಮಾರ್ರವರನ್ನು ನೋಡಿದ್ರೆ ತಿಳಿಯುತ್ತೆ ಎಂದ ಅವರು, ತೇಜಸ್ವಿನಿ ರವರಿಗೆ ಟಿಕೇಟ್ ತಪ್ಪಿಸಿ ಯಡಿಯೂರಪ್ಪ ದ್ವೇಷ ತೀರಿಸಿ ಕೊಂಡಿದ್ದಾರಾ ಎಂಬುದರ ಬಗ್ಗೆ ಉತ್ತರ ಬೇಕಿದೆ ಎಂದರು.
ಯಡಿಯೂರಪ್ಪನವರಿಗೆ ರೆಸ್ಟ್ ಅವಶ್ಯಕತೆ ಇದೆ. ಅವರಿಗೆ ರೆಸ್ಟ್ ನೀಡಿ, ಅವರು ವಿರೋಧ ಪಕ್ಷದ ನಾಯಕರಾಗಿ, ಸಿಎಂ ಆಗಿ ಕೆಲಸ ಮಾಡಿದ್ದಾರೆ. ಅವರ ಪಾರ್ಟಿಯವರೇಅವರನ್ನು ಪಾರ್ಲಿಮೆಂಟ್ ಚುನಾವಣೆಯ ಬಳಿಕ ಬದಲಾವಣೆ ಮಾಡುತ್ತಾರೆ. ಯಡಿಯೂರಪ್ಪನವರನ್ನು ಬಿಜೆಪಿಯವರು ಕಾಟಚಾರಕ್ಕೆ ಇಟ್ಟು ಕೊಂಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಅಭ್ಯರ್ಥಿ ರಾಘವೇಂದ್ರ ರವರು ತಮ್ಮ ತಂದೆ ಹಾಗೂ ಎಸ್.ಎಂ.ಕೃಷ್ಣರವರ ಆಶೀರ್ವಾದ ಪಡೆಯದೆ ಇರುವುದೇ ಅವರ ಸೋಲಿಗೆ ಕಾರಣವಾಗಲಿದೆ. ಆಶೀರ್ವಾದಮಾಡಲು ಹಾಗೂ ಮಾಡಿಸಿಕೊಳ್ಳಲು ಪುಣ್ಯಬೇಕು ಎಂದು ಮಾರ್ಮಿಕವಾಗಿ ಹೇಳಿದರು. ಸರ್ವೆ ಮಾಡಿಸಿಯೇ ಮಧುವನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಬಂಗಾರಪ್ಪನವರ ಯೋಜನೆಯನ್ನೆ ಇಂದಿಗೂ ಮುಂದುವರೆಸಿ ಕೊಂಡು ಬಂದಿದ್ದೇವೆ. ಬಂಗಾರಪ್ಪ ಈಗಲೂ ನಮ್ಮ ಹೃದಯದಲ್ಲಿದ್ದಾರೆ. ಮಹಾಘಟಬಂಧನ್ನಲ್ಲಿ ನಾನು ದೇವರು ಮತ್ತು ಭಕ್ತರ ನಡುವಿನ ಪೂಜಾರಿ ಎಂದು ತಿಳಿಸಿದರು.