ಶಿವಮೊಗ್ಗ:ಈ ಬಾರಿಯ ಗಣೇಶೋತ್ಸವ ಮೆರವಣಿಗೆಯಲ್ಲಿ ಯಾರೂ ಡಿಜೆ ಬಳಸುವಂತಿಲ್ಲ. ಪ್ರತಿ ವರ್ಷವೂ ಡಿಜೆ ಅನ್ನು ಬ್ಯಾನ್ ಮಾಡುತ್ತಿದ್ದೆವು. ಹಾಗೆಯೇ ಈ ವರ್ಷವೂ ಡಿಜೆ ಬ್ಯಾನ್ ಮಾಡುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತಂತೆ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದೆವು. ಡಿಸಿ ಅವರು ಯಾರು ಮೆರವಣಿಗೆ ವೇಳೆ ಡಿಜೆ ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಹಾಗಾಗಿ ಸಾರ್ವಜನಿಕರು ಈ ಆದೇಶ ಪಾಲಿಸಬೇಕು ಎಂದರು.