ಕರ್ನಾಟಕ

karnataka

ETV Bharat / state

ಜಿಲ್ಲಾ ವಕ್ಫ್​ ಬೋರ್ಡ್​ ನೂತನ ಅಧ್ಯಕ್ಷ ಅಬ್ದುಲ್ ಘನ್ನಿ ಆಯ್ಕೆ - shivamogg latest news

ಶಿವಮೊಗ್ಗ ಜಿಲ್ಲೆಯ ವಕ್ಫ್​ ಬೋರ್ಡ್​ ನೂತನ ಅಧ್ಯಕ್ಷರಾಗಿ ಅಬ್ದುಲ್​ ಘನ್ನಿ ಅಧಿಕಾರಿ ವಹಿಸಿಕೊಂಡರು. ಸಂಸದ ಬಿ.ವೈ.ರಾಘವೇಂದ್ರ ಹೂ ಗುಚ್ಛ ನೀಡಿ ಅಭಿನಂದಿಸಿದರು.​

District Waqf Board elected new President Abdul Ghani
ವಕ್ಫ್​ ಬೋರ್ಡ್​ ನೂತನ ಅಧ್ಯಕ್ಷ ಅಬ್ದುಲ್ ಘನ್ನಿ ಆಯ್ಕೆ

By

Published : Sep 10, 2020, 4:45 PM IST

Updated : Sep 10, 2020, 5:37 PM IST

ಶಿವಮೊಗ್ಗ: ಜಿಲ್ಲಾ ವಕ್ಫ್ ಬೋರ್ಡ್ ನೂತನ ಅಧ್ಯಕ್ಷರಾಗಿ ಅಬ್ದುಲ್ ಘನ್ನಿ ಅಧಿಕಾರ ಸ್ವೀಕರಿಸಿದರು. ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಹೂ ಗುಚ್ಛ ನೀಡಿ ಅಭಿನಂದಿಸಿದರು.

ವಕ್ಫ್​ ಬೋರ್ಡ್​ ನೂತನ ಅಧ್ಯಕ್ಷ ಅಬ್ದುಲ್ ಘನ್ನಿ ಆಯ್ಕೆ

ಸಂಸದ ರಾಘವೇಂದ್ರ ಮಾತನಾಡಿ, ಸಿಕ್ಕಿರುವ ಅವಕಾಶವನ್ನು ಯಾವುದೇ ಕಪ್ಪು ಛಾಯೆ ಮೂಡದಂತೆ ಕಾರ್ಯನಿರ್ವಹಿಸಿ. ಉತ್ತಮ ಸೇವೆ ಮಾಡಿ ಎಂದು ನೂತನ ಅಧ್ಯಕ್ಷರಿಗೆ ಹಾರೈಸಿದರು.

ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತಿವೆ. ಹಾಗಾಗಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಹಾಗೂ ಕೊರೊನ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಎಲ್ಲರೂ ಜಾಗೃತರಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳಿಧರ್ ಹಾಗೂ ಬಿಜೆಪಿ ಮುಖಂಡರು ಇದ್ದರು.

Last Updated : Sep 10, 2020, 5:37 PM IST

ABOUT THE AUTHOR

...view details