ಶಿವಮೊಗ್ಗ:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿದರು.
ಮಳೆಯಿಂದ ಕಳೆಗುಂದಿದ ಎಸ್ಪಿ ಕಚೇರಿ ಸೌಂದರ್ಯ: ಸಿಬ್ಬಂದಿಯಿಂದಲೇ ಸ್ವಚ್ಛತೆ - ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣವನ್ನು ಸ್ವಚ್ಛಗೊಳಿಸಿದ ಸಿಬ್ಬಂದಿ.

ಪೊಲೀಸ್ ವರಿಷ್ಠಾಧಿಕಾರಿ ಆವರಣ
ಶಿವಮೊಗ್ಗ ಸಾಗರ ರಸ್ತೆಯಲ್ಲಿ ಇರುವ ಎಸ್ಪಿ ಕಚೇರಿಯ ಆವರಣ ಹಾಗೂ ಕಚೇರಿಯ ಮುಂಭಾಗದಲ್ಲಿ ಕಚೇರಿಯ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿದರು. ಬಿಡದೆ ಮಳೆ ಸುರಿಯುತ್ತಿರುವುದರಿಂದ ಗಿಡ ಗಂಟಿಗಳು ಹೆಚ್ಚು ಬೆಳೆಯುತ್ತಿವೆ, ಇದರಿಂದ ಎಸ್ಪಿ ಕಚೇರಿಯ ಸೌಂದರ್ಯ ಕಳೆಗುಂದಿತ್ತು ಹಾಗಾಗಿ ಸಿಬ್ಬಂದಿ ಎಸ್ಪಿ ಶಾಂತರಾಜು ಆದೇಶದ ಮೇರೆಗೆ ಎಎಸ್ಪಿ ಡಾ,ಶೇಖರ್ ಮುಂದಾಳತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.