ಶಿವಮೊಗ್ಗ:ಇತರೆ ಇಲಾಖೆಗಳಂತೆ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನೌಕರರನ್ನು ಗೌರವಿಸುವ ಕೆಲಸ ಸರ್ಕಾರದಿಂದ ಆಗಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ಅಧಿಕಾರಿಗಳು ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ನಂಜುಂಡ ಸ್ವಾಮಿ ಆಗ್ರಹಿಸಿದರು.
ಆರೋಗ್ಯ ಇಲಾಖೆ ನೌಕರರನ್ನು ಸರ್ಕಾರ ಗೌರವಿಸಬೇಕು: ನಂಜುಂಡ ಸ್ವಾಮಿ ಆಗ್ರಹ - ನಂಜುಂಡಸ್ವಾಮಿ
ಇತರೆ ಇಲಾಖೆಗಳಂತೆ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನೌಕರರನ್ನು ಗೌರವಿಸುವ ಕೆಲಸ ಸರ್ಕಾರದಿಂದ ಆಗಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ಅಧಿಕಾರಿಗಳು ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ನಂಜುಂಡ ಸ್ವಾಮಿ ಆಗ್ರಹಿಸಿದರು.
ನಂಜುಂಡಸ್ವಾಮಿ
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶಿಕ್ಷಕರ ದಿನಾಚರಣೆ, ಅರಣ್ಯ ಇಲಾಖೆ, ಪೌರಕಾರ್ಮಿಕರ ದಿನಾಚರಣೆ, ಪೋಲಿಸ್ ದಿನಾಚರಣೆ ದಿನಗಳಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ಸೇವೆಯನ್ನು ಗೌರವಿಸಲಾಗುತ್ತದೆ. ಆದರೆ ಶಿಕ್ಷಣ ಇಲಾಖೆಯ ನಂತರದಲ್ಲಿ ಎರಡನೇ ಸ್ಥಾನದಲ್ಲಿರುವ ಆರೋಗ್ಯ ಇಲಾಖೆಯ ನೌಕರರಿದ್ದಾರೆ. ಆದರೆ ಅವರ ಸೇವೆಯನ್ನು ಗುರುತಿಸಿ ವೈದ್ಯ ದಿನಾಚರಣೆಯಂದು ಗೌರವಿಸುವ ಕಾರ್ಯ ಸರ್ಕಾರದಿಂದಾಗಬೇಕು ಎಂದರು.