ಕರ್ನಾಟಕ

karnataka

ETV Bharat / state

ಜಿಲ್ಲಾ ಮಂತ್ರಿಗಳು ಕಾಣೆಯಾಗಿದ್ದಾರೆ.. ಹೆಚ್ ಎಸ್ ಸುಂದರೇಶ್

ಬಿಜೆಪಿಯವರು ಕೆಲಸ ಮಾಡಿದ್ದೆ ಇಲ್ಲ, ಅವರು ತಮ್ಮ ಕೆಲಸ ಮಾಡುವುದನ್ನು ಬಿಟ್ಟು, ಕೇವಲ ಕಾಂಗ್ರೆಸ್ ಅನ್ನು ಟಿಕೀಸುವುದನ್ನು ಕೆಲಸ ಮಾಡಿಕೊಂಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ದೂರಿದ್ದಾರೆ.

HS Sundaresh
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್

By

Published : Oct 18, 2022, 4:24 PM IST

Updated : Oct 18, 2022, 6:40 PM IST

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕಾಣೆಯಾಗಿದ್ದಾರೆ. ಅವರನ್ನು ನಾವು ಆಗಸ್ಟ್ 15 ರಂದು ನೋಡಿದ್ದು ಬಿಟ್ಟರೆ, ಅವರನ್ನು‌ ನಾವು ಮತ್ತೆ ನೋಡಲೇ ಇಲ್ಲ ಎಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಕಿಡಿಕಾರಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು‌, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ ಸಿ ನಾರಾಯಣ ಗೌಡ ಆಗಸ್ಟ್​ನಲ್ಲಿ ಬಂದು ಹೋಗಿದ್ದು, ಬಿಟ್ಟರೆ ಅವರನ್ನು ನಾವು ನೋಡಲೇ ಇಲ್ಲ. ಅವರು ಜಿಲ್ಲೆಯಲ್ಲೇ ಇದ್ದು ಇಲ್ಲಿನ ಆಗು ಹೋಗುಗಳನ್ನು ಗಮನಿಸಬೇಕೆಂದರು.‌

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್

ಬಿಜೆಪಿಯವರು ಕೆಲಸ ಮಾಡಿದ್ದೇ ಇಲ್ಲ, ಅವರು ತಮ್ಮ ಕೆಲಸ ಮಾಡುವುದನ್ನು ಬಿಟ್ಟು, ಕೇವಲ ಕಾಂಗ್ರೆಸ್ ಅನ್ನು ಟೀಕಿಸುವುದನ್ನು ಕೆಲಸ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಮುಂದಿನ ಚುನಾವಣೆಯಲ್ಲಿ 150 ಸೀಟು ಗೆಲ್ಲುತ್ತೇವೆ ಎಂದು ಈಗಲೇ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ.‌ ನಾವು ರಾಜ್ಯ ಪ್ರವಾಸ ಮಾಡುತ್ತೇವೆ ಎಂದು ಜನತೆಗೆ ಮಂಕುಬೂದಿ ಎರಚುತ್ತಿದ್ದಾರೆ. ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ತಾವು ಸಿಎಂ ಆದ್ರು, ಮಗನನ್ನು ಸಂಸದರನ್ನಾಗಿ ಮಾಡಿದ್ರು. ಅವರು ವೈಯಕ್ತಿಕವಾಗಿ ಅಭಿವೃದ್ಧಿಯಾಗಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಮಳೆಯಿಂದ ವಿಪರೀತ ಹಾನಿಯಾಗಿದೆ. ರೈತರ ನೆರವಿಗೆ ಯಾರೂ ಧಾವಿಸುತ್ತಿಲ್ಲ. ಆದರೆ ಬಿಜೆಪಿಯ ಮಂತ್ರಿಗಳು ಕೇವಲ ಮಾಧ್ಯಮಗಳ ಮಂದೆ ಹೇಳಿಕೆ ನೀಡುವುದನ್ನು ಕೆಲಸ ಮಾಡಿಕೊಂಡಿದ್ದಾರೆ.‌ ಸಿಎಂ ಬೊಮ್ಮಾಯಿ ಅವರು ಯೋಜನೆಗಳಿಗೆ ಹಣ ಘೋಷಣೆ ಮಾಡುತ್ತಾರೆ.‌ ಆದರೆ, ಕಾಮಗಾರಿಗಳಿಗೆ ಹಣವನ್ನೇ ಬಿಡುಗಡೆ ಮಾಡಲ್ಲ ಎಂದು ಸುಂದರೇಶ್ ಆರೋಪಿಸಿದರು.

ಭಾರತ್ ಜೋಡೋ ಯಾತ್ರೆ ಅಭೂತಪೂರ್ವ ಯಶಸ್ಸು:ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಯಾತ್ರೆ ಪ್ರಾರಂಭ ಮಾಡಿದ್ದು, ಅಭೂತಪೂರ್ವ ಯಶಸ್ವಿ ಕಂಡಿದೆ.‌ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಉದ್ದಕ್ಕೂ ಪಾದಯಾತ್ರೆ ನಡೆಸಿದ್ದರು. ಅದೇ ರೀತಿ ರಾಹುಲ್ ಗಾಂಧಿ ಸಹ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ವೇಳೆ ರಾಹುಲ್ ಅವರು ಎಲ್ಲಾ ಜನರನ್ನು ಮಾತನಾಡಿಸಿಕೊಂಡು ಯಾತ್ರೆ ನಡೆಸುತ್ತಿದ್ದಾರೆ ಎಂದರು.

ಈ ವೇಳೆ ಹೆಚ್ ಸಿ ಯೋಗಿಶ್, ಯಮುನ ರಂಗೇಗೌಡ, ರಾಮಚಂದ್ರಪ್ಪ ಸೇರಿ‌ ಇತತರಿದ್ದರು.

ಇದನ್ನೂ ಓದಿ:ದೇಶವನ್ನು ತುಂಡು ಮಾಡಿ ಈಗ ಭಾರತ್ ಜೋಡೋ ಪಾದಯಾತ್ರೆ ಮಾಡಿದ್ರೆ ಜನ ಒಪ್ಪುತ್ತಾರೆಯೇ?: ಕೆ ಎಸ್​ ಈಶ್ವರಪ್ಪ

Last Updated : Oct 18, 2022, 6:40 PM IST

ABOUT THE AUTHOR

...view details